ನಾಡ ಹಬ್ಬ ನವರಾತ್ರಿ ಪ್ರಯುಕ್ತ – ಶ್ರೀ ದುರ್ಗಾ ದೇವಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಅದ್ಧೂರಿಯಾಗಿ ಜರುಗಿತು.
ದೇವರ ಹಿಪ್ಪರಗಿ ಸ.24






ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ದೇವರ ಹಿಪ್ಪರಗಿ ಪಟ್ಟಣ ನಾಡ ಹಬ್ಬ ನವರಾತ್ರಿ ಅಂಗವಾಗಿ. ಶ್ರೀ ದುರ್ಗಾ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ದೇವರ ಹಿಪ್ಪರಗಿ ಪಟ್ಟಣದ. ಗೌಡರೆಂದೆ ಪ್ರಖ್ಯಾತರದ ಸುರೇಶ ಗೌಡ ಕಲ್ಲನಗೌಡ ಪಾಟೀಲ. ಅವರ ಗೌಡರ ಪರಂಪರೆ ಇಂದ ಪ್ರತಿ ವರ್ಷ ನಡೆದು ಕೊಂಡು ಬರುತ್ತಿರುವ ನಾಡ ದೇವಿ ಉತ್ಸವ ನಗರದ ಕೆ.ಇ.ಬಿ ರಸ್ತೆ ಯಿಂದ ಸುರೇಶ ಗೌಡರ ಮನೆ ದೇವಿ ಪ್ರತಿಷ್ಠಾಪನ ಮಂಟಪದ ವರೆಗೆ ಭವ್ಯ ಮೆರವಣಿಗೆ ಯಿಂದ ಅದ್ದೂರಿಯಾಗಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಶ್ರೀ ದೇವಿ ಮೂರ್ತಿಯ ಮೆರವಣಿಗೆ ಮೂಲಕ ಶಾಂತ ರೀತಿಯಿಂದ ಭಕ್ತಿ ಭಾವಗಳ ಮೂಲಕ ಕರೆ ತರಲಾಯಿತು.

ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳಾದ. ಡೊಳ್ಳು. ಕುಣಿತ ವೀರಗಾಸೆ .ಜೋಗುತಿಯರ ಕಸರತ್ ಕುಣಿತವಾದ್ಯ ಮೇಳಗಳಿಂದ ಭಾಜ ಭಜಂತ್ರಿಗಳ ಶೋಭಿಸುವ ತುಂಬಿ ದೇವಿಯ ಮೂರ್ತಿ ಮೆರವಣಿಗೆ ನೆರವೇರಿತು.

ಶೈಲ ಪುತ್ರಿ ದೇವಿ ಮೊದಲನೇ ಅವತಾರ. ಎನ್ನುವ ದೇವಿಯ ಪ್ರತಿಷ್ಠಾಪನೆ ಗೊಂಡು ಒಂಬತ್ತು ದಿನಗಳ ದೇವಿಯ ಪ್ರತಿಷ್ಠಾಪನೆಯ. ಭಕ್ತಿ ಭಾವ ಕಾರ್ಯಕ್ರಮ ನಡೆಯುವುದು. ಸುರೇಶ ಗೌಡರ ಓಣಿಯಲ್ಲಿ ವಿವಿಧ ಕಾರ್ಯಕ್ರಮಗಳು. ಜರುಗಲಿದ್ದು.
ಸುಮಂಗಲೆಯರಿಂದ ಕುಂಭ ಕಳಸಗಳ ಭವ್ಯ ಕಾರ್ಯಕ್ರಮ ಗಳೊಂದಿಗೆ. ಗೌಡರ ಪ್ರಸಾದ ಸೇವೆ ನೆರವೇರಿತು. ಒಂಬತ್ತು ದಿನಗಳ ಕಾರ್ಯಕ್ರಮಕ್ಕೆ ಸುರೇಶ ಗೌಡರು ಚಾಲನೆ ನೀಡಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ ಸಿಂದಗಿ