ಶ್ರೀ ಮಹಿಬೂಬ ಸುಬಹಾನಿ ಮುತ್ಯಾನ ಜಾತ್ರಾ ನಿಮಿತ್ತವಾಗಿ – ವಿವಿಧ ಸ್ಪರ್ಧೆಗಳು.
ಗುಂಡಕರ್ಜಗಿ ಸ.26





ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ಶ್ರೀಮಹಿಬೂಬ ಸುಬಹಾನಿ ಜಾತ್ರಾ ಮಹೋತ್ಸವ ಅಕ್ಟೋಬರ್ 3 ರಿಂದ ಅಕ್ಟೋಬರ್ 5 ರ ವರೆಗೆ ಪವಾಡ ಪುರುಷರಾದ ಪೂಜ್ಯ ಶಂಕರ್ ಲಿಂಗ ಶ್ರೀಗಳ ಇವರ ಹಾಗೂ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುವುದು. ದಿನಾಂಕ: 3-10-25- ಶುಕ್ರವಾರ ದಂದು ಶ್ರೀ ಮಹಿಬೂಬ ಸುಬಹಾನಿ ದೇವರಿಗೆ ಕುದುರೆಯ ಮೆರವಣಿಗೆ ಯೊಂದಿಗೆ ಗಂದ ಹೊಯ್ಯುವುದು ನಂತರ ಸಕಲ ಸದ್ಭಕ್ತರು ದೈವ ಮಂಡಳಿಯಿಂದ ಗಂಧ ಏರುವುದು, ಮತ್ತು ಮದ್ದು ಸುಡುವುದು, ನಂತರ ರಾತ್ರಿ 10 ಗಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶಿವ ಭಜನೆ ನಡೆಯುವುದು. ದಿನಾಂಕ : 4-10-25 ಶನಿವಾರ ದಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಕಾಶಿಲಿಂಗೇಶ್ವರ ದೇವರಿಗೆ ಅಭಿಷೇಕ ನಂತರ ಶ್ರೀ ಮಹಿಬೂಬ ಸುಬಹಾನಿ ಉರುಸು ಜರುಗುವುದು.

ನಂತರ ಮುಂಜಾನೆ 11:00 ಗೆ ತೇರ ಬಂಡಿ ಸ್ಪರ್ಧೆ : ಸೂಚನೆ, (ಡಾಂಬರ ರಸ್ತೆಯಲ್ಲಿ ) 1 ನೇ. ಬಹುಮಾನ, 40,001. 2 ನೇ. 30,001. 3 ನೇ. 20,001. 4 ನೇ. 15001. 5 ನೇ. 10,001. 6 ನೇ. 8001. 7 ನೇ. 7001. 8 ನೇ. 5001. ಇರುವುದು. ದಿನಾಂಕ: 5.10.2025 ರವಿವಾರ ದಂದು ಬೆಳಿಗ್ಗೆ 8:00 ಗೆ ಸಾಧು ಮಹಾರಾಜರಿಗೆ ಬಟ್ಟೆ ವಿತರಣೆ, ನಂತರ 11- ಗಂಟೆಗೆ ಎತ್ತಿನಗಾಡಿ ರೇಸ್, ಸೂಚನೆ: (ಡಾಂಬರ ರಸ್ತೆಯಲ್ಲಿ ) 1 ನೇ ಬಹುಮಾನ, 15001. 2 ನೇ. 10001. 3 ನೇ. 7001. 4 ನೇ. 5001. 5 ನೇ. 3001. ಬಹುಮಾನ ಇರುತ್ತದೆ. ಪ್ರತಿದಿನ ಜಾತ್ರೆಯ ಅಂಗವಾಗಿ ರೂಡಗಿ ಸದ್ಭಕ್ತರಿಂದ ಮಹಾ ಪ್ರಸಾದ ಇರುತ್ತದೆ. ಅಂದೆ ರಾತ್ರಿ 8= ಗಂಟೆಗೆ ದಾನಿಗಳಿಗೆ ಪೂಜ್ಯರಿಂದ ಸನ್ಮಾನ ಕಾರ್ಯಕ್ರಮ ನಡೆಯಲಾಗುತ್ತದೆ. ಎಂದು ಜಾತ್ರಾ ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ :- 7760606871- 9632970304- 9663633612 ಈ ನಂಬರಿಗೆ ಸಂಪರ್ಕಿಸಿರಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ.ಮುದ್ದೇಬಿಹಾಳ