ಪರಿಶಿಷ್ಟ ಪಂಗಡಕ್ಕೆ ಬೇರೆ ಇತರೆ ಜಾತಿಗಳನ್ನು ಸೇರ್ಪಡೆ ಮಾಡಲು ಹೊರಟಿರುವ – ಸರ್ಕಾರದ ವಿರುದ್ಧ ಆಕ್ರೋಶ.
ಕೊಟ್ಟೂರು ಸ.25





ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಭಾ ಮತ್ತು ಶ್ರೀ ವಾಲ್ಮೀಕಿ ನವ ಯುವಕರ ಸೇವಾ ಸಂಘದ ವತಿಯಿಂದ ಸಪ್ಟಂಬರ್ 25 ಗುರುವಾರ ರಂದು ಕೊಟ್ಟೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ಮೂಲಕ ಗ್ರೇಡ್-2 ತಹಶೀಲ್ದಾರರಿಗೆ ಪರಿಶಿಷ್ಟ ಪಂಗಡಕ್ಕೆ ಇತರೆ ಜಾತಿಗಳನ್ನು ಸೇರ್ಪಡೆ ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ಸಮುದಾಯದ ಮುಖಂಡರಾದ ಬಿ.ಎಸ್.ಆರ್ ಮೂಗಣ್ಣ, ಪಕೀರಪ್ಪ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತಿತರರು ಸರ್ಕಾರದ ವಿರುದ್ಧ ಘೋಷಣ ಕೂಗುತ್ತಾ ಮಾತನಾಡಿದರು.
ಈ ಸಂದರ್ಭದಲ್ಲಿ ತೋಟದ ರಾಮಣ್ಣ ಪಟ್ಟಣ ಪಂಚಾಯತಿ ಸದಸ್ಯರು ಜಿ.ಮಲ್ಲಿಕಾರ್ಜುನ್, ಕೆ.ಮಂಜುನಾಥ್ ವಾಲ್ಮೀಕಿ ಸಮಾಜದ ಅಧ್ಯಕ್ಷರು, ಹ್ಯಾಳ್ಯ ಮಾಂತೇಶ್, ಪ್ರಕಾಶ್ ವಕೀಲರು ಗಂಗಮ್ಮನಹಳ್ಳಿ ಬಸವರಾಜ್ ತೂಲಹಳ್ಳಿ ಮತ್ತು ಕೊಟ್ಟೂರು ಸುತ್ತಮುತ್ತಲಿನ ಪರಿಶಿಷ್ಟ ಪಂಗಡದ ಎಲ್ಲಾ ಮುಖಂಡರು ಮತ್ತು ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್. ಕುಮಾರ್.ಸಿ ಕೊಟ್ಟೂರು