ಹಿರಿಯ ಸದಸ್ಯೆ ಲಕ್ಷ್ಮೀದೇವಿ ನಾಯಕ ಪ್ರಶ್ನೆಗೆ – ಅಧಿಕಾರಿಗಳು ತಬ್ಬಿಬ್ಬು.
ಮಾನ್ವಿ ಸ.26





ಮಾನ್ವಿ ಪಟ್ಟಣದ ಬಸ್ ನಿಲ್ದಾಣ ಮುಂದೆ ಇರುವ ಮಳಿಗೆಗಳನ್ನು ಹರಾಜು ಮಾಡದ ಹಿನ್ನೆಲೆಯಲ್ಲಿ ಪುರಸಭೆಯ ಆದಾಯಕ್ಕೆ ಲಕ್ಷಾಂತರ ರುಪಾಯಿ ಕೊಕ್ಕೆ ಬಿದ್ದಿದೆ ಎಂದು ಹಿರಿಯ ಸದಸ್ಯೆ ಲಕ್ಷ್ಮೀದೇವಿ ನಾಯಕ ಗುಡುಗಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಎರಡು ವರ್ಷದಿಂದ 10 ಮಳಿಗೆ ಪಡೆದವರು ಬಾಡಿಗೆ ಕಟ್ಟಿಲ್ಲ ಇದರಿಂದ ಪುರಸಭೆಗೆ ನಷ್ಟವಾಗಿದೆ ಎಂದು ಕಿಡಿಕಾರಿದರು.
ಹರಾಜು ಮಾಡುವ ಸಂದರ್ಭದಲ್ಲಿ ಉಳಿದ 10 ಮಳಿಗೆದಾರರಿಗೆ ನೋಟಿಸ್ ಕೊಟ್ಟಿದ್ದೀರಾ ಅದೇ ರೀತಿಯಲ್ಲಿ ಇನ್ನೂಳಿದ 30 ಮಳಿಗೆಗಳನ್ನು ಹರಾಜು ಮೂಲಕ ಪಡೆದವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ