ಧರ್ಮಸ್ಥಳದ ಮೂಲ ಮಾಲೀಕತ್ವ, ಶೈವ ಪರಂಪರೆ ಕುರಿತು ಹೊಸ ವಿವಾದ – ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ.
ಮಂಗಳೂರು/ಉಡುಪಿ ಸ.27





ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕೇಂದ್ರ ಧರ್ಮಸ್ಥಳ ಮತ್ತು ಅದರ ಆಡಳಿತ ಮಂಡಳಿಯ ಸುತ್ತ ಹಲವು ದಶಕಗಳಿಂದ ನಡೆದಿರುವ ವಿವಾದಗಳ ಜೊತೆಗೆ, ಇತ್ತೀಚೆಗೆ ದೇವಾಲಯದ ಮೂಲ ಭೂಮಿಯ ದಾಖಲಾತಿಗಳು ಮತ್ತು ಐತಿಹಾಸಿಕ ಮಾಲೀಕತ್ವದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸ್ವರೂಪಿ ಚರ್ಚೆ ಆರಂಭವಾಗಿದೆ. ಹಾಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬವು ೧೫೦ ರಿಂದ ೨೦೦ ವರ್ಷಗಳ ಹಿಂದೆ ಈ ಕ್ಷೇತ್ರದ ಮೂಲ ಮಾಲೀಕರಾಗಿರಲಿಲ್ಲ ಎಂಬ ಗಂಭೀರ ವಾದಗಳು ಮುಂಚೂಣಿಗೆ ಬಂದಿವೆ.
ಶೈವ ಪರಂಪರೆ ಮತ್ತು ಮೂಲ ಯಜಮಾನರ ಪ್ರಶ್ನೆಸಾರ್ವಜನಿಕ ಚರ್ಚೆಗಳಲ್ಲಿ, ಧರ್ಮಸ್ಥಳವು ಮೂಲತಃ ಶೈವಾರಾಧನೆಯ ಕ್ಷೇತ್ರವಾಗಿತ್ತು ಎಂಬ ವಾದವನ್ನು ಬಲವಾಗಿ ಮಂಡಿಸಲಾಗುತ್ತಿದೆ. ಮೂಲ ಆರಾಧನೆ: ಧರ್ಮಸ್ಥಳದ ಮೂಲ ದೇವರು ‘ಶಿವ’ ಆಗಿದ್ದು, ಇಲ್ಲಿ ಶೈವರು ಶಿವಲಿಂಗಕ್ಕೆ ಅಹಿಂಸಾವಾದ, ಪ್ರೀತಿ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು. ಈ ಪೂಜಕರನ್ನು ಪೂಜ್ಯನೀಯರು ಎಂದು ಕರೆಯಲಾಗುತ್ತಿತ್ತು.
ರಾಜತ್ವ ಮತ್ತು ಧರ್ಮ:
ಭೂತಾರಾಧನೆಯ ವ್ಯವಸ್ಥೆಯಲ್ಲಿ ಈ ಶೈವ ಮನೆತನದವರೇ (ಜಮೀನ್ದಾರರು ಅಥವಾ ಅರಸರು) ಯಜಮಾನ/ರಾಷ್ಟ್ರಪತಿ ಆಗಿರುತ್ತಿದ್ದರು. ಶಿವತತ್ವದ ಅಹಿಂಸಾವಾದವು ಈ ಭೂತಾರಾಧನೆಗೆ ಮೂಲ ಮಂತ್ರವಾಗಿತ್ತು. ಈ ವ್ಯವಸ್ಥೆಯಲ್ಲಿ ಸಂಸ್ಕೃತ ಭಾಷೆಗಿಂತಲೂ ಪಾಲಿ ಭಾಷೆಯ ಸಹೋದರಿ ಭಾಷೆಗಳಿಗೆ, ಅಂದರೆ ಭಾರತದ ಮೂಲ ಭಾಷೆಗಳಿಗೆ ಪ್ರಾತಿನಿಧ್ಯ ಇತ್ತು.
ಕಲ್ಲುಕುಡ ಮತ್ತು ಬಾಹುಬಲಿ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ದೈವ ಕಲ್ಲುಕುಡನೇ? ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯನ್ನು ಶೈವಾರಾದಕರಾದ ಗಂಗರು ಅವರ ದಂಡನಾಯಕನಾದ ಇಳವ ಸಮಾಜದ ವ್ಯಕ್ತಿಯ ನಾಯಕತ್ವದಲ್ಲಿ ಕೆತ್ತಿಸಲಾಯಿತು. ಕಾರ್ಕಳದ ಗೋಮಟೇಶ್ವರ ವಿಗ್ರಹವನ್ನು ಕೆತ್ತಿಸಿದವನು ಭೈರವ (ಶೈವಾರಾದಕ). ಭೈರವನಿಗೆ ಬೆಂಬಲಕ್ಕೆ ನಿಂತವರು ಸಾಮಂತರಾದ ಈ ಪ್ರಾಂತ್ಯದ ಮೂಲ ಜಮೀನ್ದಾರ್‌ಗಳಾದ ಶೈವ ಹೆಗ್ಡೆಗಳು ಎಂದು ಹೇಳಲಾಗಿದೆ.
ಇದಕ್ಕೆ ಸಾಕ್ಷಿ ಎರಡು ಸಾವಿರ ವರ್ಷಗಳ ಹಿಂದೆ ಕಾಪುವಿನಲ್ಲಿ ಇರುವ ಮಲ್ಲಾರ್ ಕೋಟೆ, ಈ ಕೋಟೆಯನ್ನು ಸ್ಥಾಪನೆ ಮಾಡಿದವರು ಶೈವ ಮಲ್ಲಾರ್‌ಗಳು ಎಂದು ಹೇಳಲಾಗಿದೆ. ಮಲ್ಲಾರ್ ಎಂದರೆ ಇಲ್ಲಿನ ಮೂಲದವರು ಎಂದು ಅರ್ಥ. ಅಣ್ಣ ಪಂಜುರ್ಲಿ ಯಾರು? ಇತನು ಹೆಣ್ಣು, ಹೆಂಡ, ಮತ್ತು ಅಧಿಕಾರದ ಮದದಲ್ಲಿದ್ದ ಭೈರವನನ್ನು ಸಂಹಾರ ಮಾಡಿದ್ದು ಇದೇ ಅಣ್ಣ ಪಂಜುರ್ಲಿಯೇ?
ವಿಠಲ ಹೆಗ್ಡೆ ಮತ್ತು ಪ್ರಶ್ನೆ:
ಈ ಚರ್ಚೆಗಳಲ್ಲಿ ವಿಠಲ ಹೆಗ್ಡೆ ಎಂಬ ಶೈವ ಜಮೀನ್ದಾರರ ಹೆಸರು ಪ್ರಸ್ತಾಪವಾಗಿದೆ. ಟಿಪ್ಪು ಮತ್ತು ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ಈ ಮೂಲ ಶೈವ ಜಮೀನ್ದಾರರು ಮತ್ತು ಅರಸರು, ವೈಷ್ಣವ, ಜೈನ ಮತ್ತು ಮನೋವಾದಿಗಳ ಕಪಿಮುಷ್ಟಿಗೆ ಬಲಿಯಾದರೇ? ಧರ್ಮ ಮಾಡುತ್ತಿರುವ ಈಗಿನ ಆಡಳಿತವು ಬಲಿಚಕ್ರವರ್ತಿಯ ಕಲ್ಪನೆಯೇ? ಎಂಬಂತಹ ಗಹನ ಪ್ರಶ್ನೆಗಳು ಎದುರಾಗಿವೆ.
‘ಉಲ್ಲರ್’ ಪದದ ಮತ್ತು ಅಧಿಕಾರ ಬದಲಾವಣೆಯ ಚರ್ಚೆಚರ್ಚೆಯ ಮತ್ತೊಂದು ಪ್ರಮುಖ ಅಂಶವೆಂದರೆ, ತುಳು ಅಥವಾ ತಮಿಳು ಮೂಲದ ಪದಗಳಾದ ‘ಉಲ್ಲಾಳ್ದಿ’ (ಯಜಮಾನನ ಹೆಂಡತಿಗೆ ಗೌರವ) ಮತ್ತು ‘ಉಲ್ಲರ್’ (ಯಜಮಾನ) ಪದದ ಮೂಲಾರ್ಥದ ಬಗ್ಗೆ. ಈ ವಾದಗಳ ಪ್ರಕಾರ, ಧರ್ಮಸ್ಥಳದ ಮೂಲ ಯಜಮಾನರು ಶೈವ ಪಂಥದವರಾಗಿದ್ದರು.
ಪ್ರಮುಖ ಪ್ರಶ್ನೆ:
ಈ ಶೈವ ಮನೆತನದ ನಂತರ ಜೈನ ಮನೆತನದವರು ಹೇಗೆ ಧರ್ಮಸ್ಥಳದ ಅಧಿಕಾರವನ್ನು ಪಡೆದರು? ಎಂಬುದು ಚರ್ಚೆಯ ಕೇಂದ್ರಬಿಂದುವಾಗಿದೆ.
ಹೊರನಾಡು ಹೋಲಿಕೆ:
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವನ್ನು ಉದಾಹರಿಸಿ, ಅಲ್ಲಿಯೂ ಮೂಲ ಅರಸರು ಅಸ್ತಿತ್ವ ಕಳೆದು ಕೊಂಡರೂ, ಜಮೀನ್ದಾರರ ಅಧಿಕಾರವು ಮೂಲ ವಂಶಸ್ಥರ ಬಳಿಯೇ ಇದೆ. ಆದರೆ, ಈ ವಂಶಸ್ಥರು ೮೦೦ ವರ್ಷಗಳ ಹಿಂದೆ ಶೈವ ಪಂಥದಿಂದ ಜೈನ ಮನೆತನಕ್ಕೆ ಮತಾಂತರ ಗೊಂಡಿದ್ದಾರೆ ಎಂದು ವಾದಿಸಲಾಗಿದೆ. ದಾನ ಮತ್ತು ದಾಖಲೆಗಳ ಕುರಿತು ಸಂಶಯ ಧರ್ಮಸ್ಥಳವು ಹಿಂದೆ ಯಾವುದೇ ಕಾಣಿಕೆ ಪಡೆಯದೆ ದಾನ ನೀಡುತ್ತಿದ್ದ ಸ್ಥಳವಾಗಿತ್ತು ಎಂಬ ಐತಿಹಾಸಿಕ ವಾದವಿದೆ. ಆದರೆ, ೧೮೦೦ರ ಇಸವಿಯ ಮೊದಲು ಧರ್ಮಸ್ಥಳದಲ್ಲಿ ಕಾಣಿಕೆಗಳನ್ನು ಸಂಗ್ರಹಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಕೆಲವರು ಹೇಳಿದ್ದಾರೆ.
ಇನ್ನು, ಸಾಮಾಜಿಕ ಮಾಧ್ಯಮಗಳಲ್ಲಿ, ಹಾಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಭೂ ದಾಖಲಾತಿಗಳನ್ನು ತಿದ್ದಿ ತಮ್ಮ ತಂದೆಯ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಹರಿದಾಡುತ್ತಿವೆ. ಈ ಚರ್ಚೆಗಳಲ್ಲಿ ಬ್ರಾಹ್ಮಣ ಸಮುದಾಯದವರ ಪಾಲ್ಗೊಳ್ಳುವಿಕೆ ಹೆಚ್ಚಿರುವುದು ಗಮನಾರ್ಹ.ಸತ್ಯ ಚರಿತ್ರೆ ಮತ್ತು ಅಧಿಕೃತ ತನಿಖೆಯ ಅಗತ್ಯಈ ಎಲ್ಲಾ ಸಂಕೀರ್ಣ ಮತ್ತು ಪರಸ್ಪರ ವಿರೋಧಾಭಾಸದ ಚರ್ಚೆಗಳು ಧರ್ಮಸ್ಥಳದ ಇತಿಹಾಸ, ಅದರ ಮೂಲ ಯಜಮಾನರು ಮತ್ತು ಆಡಳಿತ ಮಂಡಳಿಯ ಅಧಿಕಾರಕ್ಕೆ ಸಂಬಂಧಿಸಿದಂತೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮೂಲ ಯಾರು?:
‘ಉಲ್ಲರ್’ ಮತ್ತು ‘ಉಲ್ಲಾಳ್ದಿ’ಯ ಮೂಲ ಯಾರು? ಅವರು ಬುದ್ಧನ ಅನುಯಾಯಿಗಳೇ? ಯಾವ ಶೈವರು?: ೧೮೦೦ ಇಸವಿಯಕ್ಕಿಂತ ಮೊದಲು ಈ ಪ್ರದೇಶವನ್ನು ಆಳಿದ ಶೈವರು ಯಾರು?
ಐತಿಹಾಸಿಕ ಸತ್ಯ:
ವಿಠ್ಠಲ್ ಹೆಗ್ಡೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ನಿಜವೇ? ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಗಬೇಕಾದರೆ, ದಾಖಲೆಗಳ ಪರಿಶೀಲನೆ ಮತ್ತು ಸತ್ಯ ಚರಿತ್ರೆಯ ಯೋಗ್ಯ ಪುಸ್ತಕ ರಚನೆ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬಂದಿದೆ. ಮೇಲ್ನೋಟಕ್ಕೆ, ಧರ್ಮಸ್ಥಳವು ೧೫೦-೨೦೦ ವರ್ಷಗಳ ಹಿಂದೆ ಈಗಿರುವ ಹೆಗ್ಗಡೆ ಕುಟುಂಬದವರ ಒಡೆತನದಲ್ಲಿ ಇರಲಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ