ಚರಂಡಿ ಇಲ್ಲದ ಕಾರಣ ಮನೆಗಳಿಗೆ – ನುಗ್ಗಿದ ಮಳೆ ನೀರು.
ಮಾನ್ವಿ ಸ.27





ತಾಲೂಕಿನಾದ್ಯಂತ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಮಾನ್ವಿ ಪಟ್ಟಣದ ರಾಜೀವಗಾಂಧಿ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದ್ದು, ಜನರು ಜಾಗರಣೆ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ರಾಜೀವಗಾಂಧಿ ಕಾಲೋನಿಯಲ್ಲಿ ಜನರಿಗೆ ಸೌಲಭ್ಯಗಳು ಸಿಗದ ಕಾರಣ ಅಮಾಯಕ ಜನರು ಬಡಪಾಯಿಗಳಾಗಿ ಜೀವನ ಮಾಡುತ್ತಾರೆ ವಿನಹ ಜನರಿಂದ ಮತ ಪಡೆದ ಜನನಾಯಕರು ಮಾತ್ರ ಕಣ್ಮರೆ ಯಾಗಿದ್ದಾರೆ.
ಮಾನ್ವಿ ಪಟ್ಟಣದ ರಾಜೀವಗಾಂಧಿ ಕಾಲೋನಿಯಲ್ಲಿ ಚರಂಡಿ ನಿರ್ಮಾಣಕ್ಕಾಗಿ ಸುಮಾರು 20 ಲಕ್ಷ ರುಪಾಯಿ ಅನುದಾನ ಬಂದಿದ್ದರು ಸಹ ಇದಿವರೆಗೂ ಚರಂಡಿ ನಿರ್ಮಾಣ ಮಾಡಿಲ್ಲ ಎಂದು ಗಂಭೀರವಾಗಿ ನಿವಾಸಿಗಳು ಆರೋಪಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ