ನೂತನ ಸಮುದಾಯ ಭವನದ – ಭೂಮಿ ಪೂಜೆ ಜರುಗಿತು.
ರಾಂಪುರ ಸ.29





ಇಂದು 29/9/2025 ರಂದು ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ರಾಂಪುರ ಗ್ರಾಮದ ಶ್ರೀ ಹುಚ್ಚಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆಯಡಿ ₹15 ಲಕ್ಷಗಳ ವೆಚ್ಚದಲ್ಲಿ ನೂತನ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿದರು. ಚಂದ್ರಶೇಖರಯ್ಯ ಸ್ವಾಮಿ, ಮುಖಂಡರಗಳಾದ ಬಿ.ಪಿ ವಿಜಯಕುಮಾರ್, ಆರ್.ಜಿ ಜಯ್ ಕುಮಾರ್, ಹೊನ್ನೂರಪ್ಪ, ಉಜ್ಜಿನಪ್ಪ, ತಿಪ್ಪಣ್ಣ, ಶ್ರೀಕಾಂತ್, ಭರತ್ ಕುಮಾರ್, ಸಂದೀಪ್, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು