ಅರಿಶಿನ ಕುಂಕುಮದೊಂದಿಗೆ ತಾಯಿ ಬಾಗಿಣ ಅರ್ಪಿಸಿದರು.
ತರೀಕೆರೆ ಸಪ್ಟೆಂಬರ್.12





ನನ್ನ ಮಗಳು ಮುತ್ತೈದೆಯ ಸೌಭಾಗ್ಯ ಹೊಂದಬೇಕು ಎಂದು ಅರಿಶಿನ ಕುಂಕುಮದೊಂದಿಗೆ ತಾಯಿ ಬಾಗಿಣ ಕೊಡುವುದು ಗೌರಿ ಗಣೇಶನ ಹಬ್ಬದ ವಾಡಿಕೆ, ಲಕ್ಷ್ಮೀನಾರಾಯಣ ಸ್ವರೂಪದ 16 ಮುತ್ತೈದೆ ದೇವತೆಗಳು ಅಲಂಕರಿಸಿ ಆಶೀರ್ವದಿಸಬೇಕು, ಮಗಳು ಸದಾಕಾಲ ಸುಮಂಗಲಿಯಾಗಿರಬೇಕೆಂದು ಆಶೀರ್ವದಿಸಿ ಹೂವು,ಹಣ್ಣು,ಸಿಹಿ ತಿಂಡಿಗಳು,ಸೀರೆ,ರವಿಕೆ,ಮತ್ತು ಜೋಡಿ ತೆಂಗಿನ ಕಾಯಿ, ಬಾಳೆ ಹಣ್ಣು, ವಿಳ್ಳೇದೆಲೆ,
ಅಡಿಕೆಯೊಂದಿಗೆ ಮಗಳಿಗೆ ತಾಯಿ ಬಾಗಿಣದ ಸಾಮಾನುಗಳನ್ನು ದಾನ ನೀಡಿ ತರೀಕೆರೆ ನಂದಿ ಗ್ರಾಮದ ಗಂಗಮ್ಮ ತನ್ನ ಮಗಳು ಕಮಲಮ್ಮನವರಿಗೆ ಬಾಗಿಣ ನೀಡಿ ಆಶೀರ್ವಾದ ಮಾಡುತ್ತಿದ್ದಾರೆ. ನನ್ನ ಪ್ರಾಣ ಇರುವವರೆಗೂ ನಾನು ಪ್ರತಿ ಗೌರಿ ಗಣೇಶನ ಹಬ್ಬದ ಸಂದರ್ಭದಲ್ಲಿ ತವರು ಮನೆ ಬಾಗಿಣ ಕೊಡುತ್ತೇನೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ