ಬಯಲು ತುಂಬರಗುದ್ದಿ ಸರ್ಕಾರಿ ಪ್ರೌಢ ಶಾಲೆಯಲ್ಲಿ – ವಿಶ್ವ ಪರಿಸರ ದಿನಾಚರಣೆ.
ಬಯಲು ತುಂಬರಗುದ್ದಿ ಜೂ.06

ಕೂಡ್ಲಿಗಿ ತಾಲೂಕಿನ ಬಯಲು ತುಂಬರಗುದ್ದಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ದಿನವೇ ವಿಶ್ವ ಪರಿಸರ ದಿನ ಪ್ರತೀ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಮಹತ್ತರವಾದ ದಿನವಿದು. ಪರಿಸರ ಸಂರಕ್ಷಣೆಗೆ ನಾವು ಸ್ವಯಂ ಪ್ರೇರಿತರಾಗಿ ಗಿಡ ನೆಟ್ಟು, ನೀರು ಹಾಕಿ, ಮರಗಳನ್ನು ಬೆಳೆಸ ಬೇಕಿದೆ. ಪರಿಸರದ ಮೌಲ್ಯವನ್ನು ಎಲ್ಲರೂ ಅರಿತುಕೊಂಡು ಮಲೀನ ಮಾಡದಂತೆ ಸಂರಕ್ಷಣೆ ಮಾಡುವಲ್ಲಿ ಶ್ರಮವಹಿಸ ಬೇಕಿದೆ. ಇನ್ನೂ ನಮ್ಮ ಆಪ್ತರ ಸಂತೋಷದ ಕ್ಷಣಗಳಿಗೆ ಕಾರಣರಾಗಲು ನಾವು ಯಾವುದೋ ಲಕ್ಷಾಂತರ ಮೌಲ್ಯದ ಉಡುಗೂರೆ ನೀಡುವ ಬದಲು ಪರಿಸರಕ್ಕೆ ಪೂರಕವಾಗುವಂತೆ ಒಂದು ಗಿಡ ಕೊಟ್ಟರೆ ಅದು ಎಲ್ಲದಕ್ಕಿಂತಲೂ ಅಮೂಲ್ಯವಾದದ್ದು ಎನಿಸಿಕೊಳ್ಳುತ್ತದೆ.

ಹೀಗೇ ಯಾವೊದೋ ಒಂದು ನೆಪದ್ಲಲಿ ಪ್ರತೀ ಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತಾನಾಗಿಯೇ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ. ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರಿಗೆ ಮರುಜನ್ಮ ನೀಡಿದ ಹಾಗೆ ಆಗುತ್ತದೆ ಎಂದರು. ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಕೆ.ಜಿ ನಾಗರಾಜ, ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ವೀರಪ್ಪ, ನಾಗರಾಜ, ಮಂಜುನಾಥ್, ಕೊಟ್ರೇಶ್, ಎಲ್ಲಾ ಸಿಬ್ಬಂದಿಗಳು ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್. ಕೆ.ಹೊಸಹಳ್ಳಿ

