ಡಾ, ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 61 ನೇ. ವರ್ಷದ ಜನ್ಮ ದಿನದ ನಿಮಿತ್ತವಾಗಿ ಜಿಲ್ಲೆಯ ನಿರ್ಗತಿಕರ ಕೇಂದ್ರದಲ್ಲಿ – ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಉಚಿತ ಕ್ಷೌರ ಸೇವೆ.
ಕಲಬುರಗಿ ಸ.30





ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಸಮಾಜದ ಸೇವಕ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸಂಘಟನಾ ಕಾರ್ಯದರ್ಶಿಗಳು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರ ನೇತೃತ್ವದಲ್ಲಿ ಇದೆ ಅಕ್ಟೋಬರ್ 1 ರಂದು ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷ.ಬ್ರ ಡಾ, ಸಿಧ್ದ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 61 ನೇ. ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ಆರು ವರ್ಷಗಳಿಂದ ಸತತವಾಗಿ ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ. ಅನಾಥ ನಿರ್ಗತಿಕರ (ಕೇಂದ್ರ) ದಲ್ಲಿ ಪೂಜ್ಯರ ಜನ್ಮ ದಿನದಂದು ವಿಶೇಷವಾಗಿ ಅನಾಥ ನಿರ್ಗತಿಕರಿಗೆ ಬುದ್ದಿ ಮಾಧ್ಯಂರಿಗೆ ಫ್ರೀಯಾಗಿ ಉಚಿತ ಕ್ಷೌರ ಸೇವೆ ಸಲ್ಲಿಸಲಾಗುತ್ತದೆ.

ಈ ಸಂಧರ್ಭದಲ್ಲಿ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕ ಮಿತ್ರರು ಮತ್ತು ಕಾಯಕ ಬಂಧುಗಳು ಸೇರುವ ಸಾಧ್ಯತೆ ಇದೆ. ನಿರ್ಗತಿಕರ ಕೇಂದ್ರ ಹೆಚ್ಚು ಜನತೆಗೆ ಪೂಜ್ಯರ ಜನ್ಮ ದಿನದಂದು ಫ್ರೀಯಾಗಿ ಸೇವೆ ಸಲ್ಲಿಸಲಾಗುವುದು ಎಂದು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಒಟ್ಟು 14.ವಿವಿಧ ಕಡೆಯಲ್ಲೂ ಉಚಿತ ಕ್ಷೌರ ಸೇವೆ ಸಲ್ಲಿಸಿ ಒಟ್ಟು 1465 ಕ್ಕೂ ಹೆಚ್ಚು ನಿರ್ಗತಿಕರ ಕೇಂದ್ರದಲ್ಲಿ ಈ ಬಾರಿ 15 ಕಡೆ ಸೇರಿದಂತೆ ನೂರಾರು ನಿರ್ಗತಿಕರಿಗೆ ಈ ವಿಭಿನ್ನವಾಗಿ ಉಚಿತ ಕ್ಷೌರ ಸೇವೆ ಮಾಡುವ ಮೂಲಕ ದೇವರ ಸೃಷ್ಟಿ ಮಾನವ ಕ್ಷೌರಿಕರ ಸೃಷ್ಟಿ. ಸುಂದರ ಮಾನವ ಕಾಯಕದ ಜೊತೆಗೆ ಉಚಿತ ಕ್ಷೌರ ಸೇವೆ ಸಲ್ಲಿಸುತ್ತಿರುವ ಈ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಸೇವಕ ಈ ರೀತಿ ಪೂಜ್ಯರ ಹುಟ್ಟು ಹಬ್ಬವನ್ನು ವಿಶೇಷವಾಗಿ ಸೇವೆ ಸಲ್ಲಿಸಲಾಗುತ್ತದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಪತ್ರಿಕೆಗೆ ತಿಳಿಸಿದರು ಎಂದು ವರದಿಯಾಗಿದೆ.