ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ & ಸಾಹಿತಿ ಡಾ, ಎಸ್.ಎಲ್ ಭೈರಪ್ಪನವರ – ನುಡಿ ನಮನ ಕಾರ್ಯಕ್ರಮ.
ಮಾನ್ವಿ ಸ.30





ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನಸಿಕ ಪಟ್ಟಣದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷ ಶರಣಬಸವ ನೀರಮಾನ್ವಿ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಪ್ರಾದೇಶಿಕವಾಗಿ ಅಂದರೆ ತಾಯಿಯೇ ತನ್ನ ಮಗನಿಗೆ ಹಾಗೂ ಮಗಳಿಗೆ ಅಮ್ಮ ಅಪ್ಪ ಎಂದು ಹೇಳಿದರೆ ಸಾಕು ಆ ಮಗುವಿಗೆ ಕನ್ನಡ ಭಾಷೆಯ ಜ್ಞಾನ ಮೂಡುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಬಳಗದವರು ಹೆಚ್ಚಾಗಿ ಕನ್ನಡ ಪರವಾದ ಕಾರ್ಯಕ್ರಮ ಕನ್ನಡ ಉಳಿವಿಗಾಗಿ ಸೇವೆ ಸಲ್ಲಿಸಿದಾಗ ಮಾತ್ರ ಕನ್ನಡ ಇನ್ನಷ್ಟು ಬೆಳೆಯಲು ಸಾಧ್ಯ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ