ಶ್ರೀಶಾರದಾಶ್ರಮದಲ್ಲಿ ಸರಸ್ವತಿ ಪೂಜೆಯ ಪ್ರಯುಕ್ತ – ಸರಸ್ವತಿ ಭಜನೆಗಳ ಕಾರ್ಯಕ್ರಮ.
ಚಳ್ಳಕೆರೆ ಅ.01

ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ನವರಾತ್ರಿಯ “ಸರಸ್ವತಿ ಪೂಜೆ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಶ್ರೀಮತಿ ಸುಮಾ ಪ್ರಕಾಶ್ ಮತ್ತು ಸಂಗಡಿಗರಿಂದ ವಿಶೇಷ ಸರಸ್ವತಿ ಭಜನೆಗಳ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಹಿಸಿದ್ದರು.

ಭಜನಾ ಕಾರ್ಯಕ್ರಮದಲ್ಲಿ ಗೀತಾ ಪ್ರಕಾಶ್, ಗೀತಾ ನಾಗರಾಜ್, ಪದ್ಮ ನಾಗರಾಜ್,ಮಂಗಳ, ಶಾಂತ,ವಿನುತಾ, ಶೋಭಾ, ಪುಷ್ಪ, ಸುಜಾತಾ,ವೇದ, ವಿಜಯಶ್ರೀ,ಸುಮಾ ನಟರಾಜ್,ವಿಜಯ, ಸೌಮ್ಯ,ಲತಾ,ಭಾರತಿ, ಸುಮನಾ ಕೋಟೇಶ್ವರ,ಜಾನಕಿ, ಯತೀಶ್ ಎಂ ಸಿದ್ದಾಪುರ, ವೆಂಕಟಲಕ್ಷ್ಮೀ, ಕೆ.ಎಸ್.ವೀಣಾ, ಅಂಬುಜಾ,ಕವಿತಾ, ಮಾಣಿಕ್ಯ ಸತ್ಯನಾರಾಯಣ, ಮಂಜುಳ, ಪಂಕಜ, ಚೇತನ್,ಸುದೀಪ್, ಅನುಸೂಯ, ಸಂಗೀತ ಸೇರಿದಂತೆ ಸಾಕಷ್ಟು ಸಂಖ್ಯೆಯ ಮಹಿಳಾ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

