ಪಡಿತರ ಅಕ್ಕಿ ವಿತರಣೆಯಲ್ಲಿ ಭಾರಿ ಮೋಸ.
ಬ್ರಹ್ಮ ದೇವನ ಮಡು ಮೇ.30


ಸಿಂದಗಿ ತಾಲೂಕಿನ ಬ್ರಹ್ಮ ದೇವನ ಮಡು ಗ್ರಾಮದಲ್ಲಿ ಪಡಿತರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಬೆಳಗ್ಗೆ ನಾಲ್ಕು ಘಂಟೆಗೆ ಪಡಿತರ ಅಕ್ಕಿಗಾಗಿ ಗ್ರಾಮಸ್ಥರು ಸರತಿ ಸಾಲಿನಲ್ಲಿ ನಿಂತರೂ ಕೂಡ ಸುಮಾರು ಜನರಿಗೆ ಸಿಗಬೇಕಾದ ಪಡಿತರ ಖಾಲಿ ಆಗಿದೆ ಎಂದು ಹೇಳುತ್ತಿದ್ದಾರೆ. ಇದು ಪ್ರತಿ ತಿಂಗಳು ನಡೆಯುವ ವಿದ್ಯಮಾನವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಫಲಾನುಭವಿಗಳಿಂದ ಬಯೋ ಮೆಟ್ರಿಕ್ ಒತ್ತಿಸಿಕೊಂಡು ಅವರಿಗೆ ಕೊಡಬೇಕಾದ ಪಡಿತರ ಕೊಡದೆ ಇರುವುದು ನೋಡಿದರೆ ಇಲ್ಲಿ ಬಹುದೊಡ್ಡ ಅಕ್ರಮ ಆಗಿರುವುದು ಕಂಡು ಬರುತ್ತದೆ ಎಂದು ನಾಗಣ್ಣ ಪಡೇಕಾನುರ್ ಆರೋಪ ಮಾಡಿದರು.ಪ್ರತಿ ತಿಂಗಳು ಹೊನ್ನಳ್ಳಿ ಹಾಗೂ ಬ್ರಹ್ಮ ದೇವನ ಮಡು ವ್ಯಾಪ್ತಿಯಲ್ಲಿ ಹನ್ನೊಂದು ರಿಂದ ಹದಿನೈದು ಕ್ವಿಂಟಾಲ್ ಅಕ್ಕಿ ಕಡಿಮೆ ಬೀಳುತ್ತಿದೆ ಎಂದು ಪಡಿತರ ವಿತರಕರು ಹೇಳುತ್ತಿದ್ದಾರೆ. ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಕೇಳಿದರೆ ನಾವು ಸರಿಯಾಗಿ ಪ್ರಮಾಣದಲ್ಲಿ ಅಕ್ಕಿ ಕಳಿಸುತ್ತಾ ಇದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಜನರಿಗೆ ಹಂಚಲು ತಂದ ಅಕ್ಕಿ ಎಲ್ಲಿ ಹೋಯಿತು ಎಂದು ಜಯ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಶರಣು ಮನಗೂಳಿ ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆಯಲ್ಲಿ ನಾನಗೌಡ ಪಾಟೀಲ, ಸಿದ್ಧಯ್ಯ ಹಿರೇಮಠ, ಆಶೋಕ್ ಕರಿಕಲ್, ನಿಂಗಪ್ಪ ಪೂಜಾರಿ, ರೇವಣಸಿದ್ಧ ಕೋರವಾರ, ರಾಜಶೇಖರ ಮನುಗುಳಿ, ಖಾದರಪಟೇಲ್ ಸಿತನುರ, ಸಿದ್ದಣ್ಣ ಮನಗೂಳಿ, ಬಾಲಚಂದ್ರ ಕರೀಕಲ್, ಮಲ್ಲು ಅಲ್ಲಪೂರ, ಆದಣ್ಣ ದ್ಯಮನಾಳ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.ಈ ಬಗ್ಗೆ ಗುರುವಾರ ಸಿಂದಗಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ, ತಾಲೂಕ ಅದ್ಯಕ್ಷ ಸಂತೋಷ್ ಮನಗೂಳಿ, ತಾಲೂಕ ಕಾರ್ಯದರ್ಶಿ ಶರಣು ಮನಗೂಳಿ, ಸಂಘಟನಾ ಕಾರ್ಯದರ್ಶಿ ನಾಗಣ್ಣ ಪಡೇಕಾನುರ, ಉಪಾಧ್ಯಕ್ಷ ಮಂಜುನಾಥ ಪತ್ತಾರ, ಗುರುಪಾದಯ್ಯ ಹಿರೇಮಠ ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಆಳ ದೇವರ ಹಿಪ್ಪರಗಿ.

