“ಮಹಾ ಭಾರತ ನೈಜತೆಯ ಜ್ಯೋತಿಗಳುವಿಶ್ವ ಬೆಳಗುವ ಕಿರಣಗಳು”…..

ಪ್ರತಿಜ್ಞೆ ಭೀಷ್ಮನ ತರಹ ಇರಲಿ




ತ್ಯಾಗತನವ ಗಾಂದಾರಿಯ ಹಾಗಿರಲಿ
ವಿದುರ ನೀತಿಯ ಮಾರ್ಗವಿರಲಿ
ಪ್ರತೀಕಾರವೇ ಬೇಡ ಆದರೆ ಅಂಬಾನ
ಅನುಸರಿಸಿ ಗುರು ಆಗುವುದಾದರೆ
ದ್ರೋಣಾಚಾರ್ಯನಂತಾಗಿ ಗುರು
ಭಕ್ತಿ ಏಕಲವ್ಯನ ತರಹವಿರಲಿ
ನಿಜ ಯುಧೀಷ್ಠರನಂತಿರಲಿ
ಸ್ನೇಹ ಸುಯೋಧನಂತಿರಲಿ
ದಾನಕ್ಕೆ ಕರ್ಣನ ಅನುಸರಿಸಿ
ಶಕ್ತಿ ಭೀಮನತರಹವಿರಲಿ
ಅಭಿಮನ್ಯುನ ಸಾಹಸವಿರಲಿ
ಅರ್ಜುನನ ಗುರಿ ಇರಲಿ
ಶಕುನಿಯ ಚಾಣಕ್ಷತನ
ಶ್ರೀಕೃಷ್ಣನ ಧರ್ಮ ಪಾಲಿಸಿ
ಮಹಾಭಾರತ ಮಹೋನ್ನತವು
ಪಾತ್ರಗಳ ಗುಣಗಳ ಅರಿ
ಜಗದಲಿ ಬೆರಿ ಇದುವೆ ಸಿರಿ
ಮಹಾಭಾರತ ಪಾತ್ರಗಳು
ಮನದಲ್ಲಿರುವ ಆಸೆಗಳು
ನೈಜತೆಯ ಜ್ಯೋತಿಗಳು
ವಿಶ್ವ ಬೆಳಗುವ ಕಿರಣಗಳು
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ