ಯಮನೆ-ಮನೆಗಳಲ್ಲಿ ಸಾಮೂಹಿಕ ಶ್ರೀದೇವಿಸ್ತುತಿ – ಪಾರಾಯಣ ಕಾರ್ಯಕ್ರಮ.
ಚಳ್ಳಕೆರೆ ಅ.02





ಶಿವ ನಗರದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ನವರಾತ್ರಿ”ಯ ಪ್ರಯುಕ್ತ “ಮನೆ-ಮನೆಗಳಲ್ಲಿ ಸಾಮೂಹಿಕ ಶ್ರೀದೇವಿಸ್ತುತಿ” ಪಾರಾಯಣ ಮತ್ತು “ದೇವಿ ಭಜನೆಗಳ” ಕಾರ್ಯಕ್ರಮವು ಸದ್ಭಕ್ತರಾದ ಶ್ರೀಮತಿ ವೀರಮ್ಮ ಬಸವರಾಜ ಅವರ ಶಿವನಗರದ ಶ್ರೀಬಸವೇಶ್ವರ ನಿವಾಸದಲ್ಲಿ ನಡೆಯಿತು.

ಪಾರಾಯಣ ಸತ್ಸಂಗದಲ್ಲಿ ಶ್ರೀಮತಿ ವೀರಮ್ಮ ಬಸವರಾಜ, ಎಂ ಗೀತಾ ನಾಗರಾಜ್, ಜಿ.ಯಶೋಧಾ ಪ್ರಕಾಶ್, ವಿಜಯಲಕ್ಷ್ಮೀ, ಪ್ರಿಯಾಂಕ, ಯತೀಶ್ ಎಂ ಸಿದ್ದಾಪುರ, ಉಷಾ ಶ್ರೀನಿವಾಸ್, ಕೆ.ಎಸ್ ವೀಣಾ, ರಶ್ಮಿ.ರಮೇಶ್, ಕೃಷ್ಣವೇಣಿ, ಗೌತಮಿ, ಸುಜಾತಾ, ದ್ರಾಕ್ಷಾಯಣಿ, ಭ್ರಮರಂಭಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕವಿತಾ ಗುರುಮೂರ್ತಿ, ಈಶಾನ್ ಗೌತಮ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.