ಸಿದ್ದನಕೊಳ್ಳದಲ್ಲಿ “ಗೀತಕುಸುಮ” – ಬಿಡುಗಡೆ.
ಸಿದ್ಧನಕೊಳ್ಳ ಅ.03





ಇಲಕಲ್ ತಾಲೂಕಿನ ನಿರಂತರ ಅನ್ನ ದಾಸೋಹ ಹಾಗೂ ಕಲಾ ಪೋಷಕರಮಠ. ಸುಕ್ಷೇತ್ರ. ಸಿದ್ದನಕೊಳ್ಳದ ಸಿದ್ದಪ್ಪಜ್ಜನ ಮಠದಲ್ಲಿ ದಸರಾ ಮಹೋತ್ಸವ ಅಂಗವಾಗಿ ಕಲಾ ಪೋಷಕಮಠ ಸಿದ್ದನಕೊಳ್ಳ ಅರ್ಪಿಸುವ “ಗೀತ ಕುಸುಮ”. ಕುಂದದ ಸುಮಧುರ ಮನಸುಗಳು ಎಂಬ. ಟ್ಯಾಗ್ ಲೈನ್‌ನೊಂದಿಗೆ ಭಾವ ಗೀತೆಗಳ ವಿಡಿಯೋ ಆಲ್ಬಂ ಸಾಂಗ್‌ಗಳನ್ನು ಬಿಡುಗಡೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ದಣ್ಣ ಮೇಟಿ, ಲಿಂಗಸೂರಿನ ಅಯ್ಯಣ್ಣಸ್ವಾಮಿ ಗಣಾಚಾರಿ, ಚಲನ ಚಿತ್ರ ಪತ್ರಕರ್ತ ಡಾ, ಪ್ರಭು ಗಂಜಿಹಾಳ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಅಮೀನಗಡದ ಸಾಹಿತಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮಹದೇವ ಬಸರಕೋಡ ವಹಿಸಿದ್ದರು.
ಸಿದ್ಧನಕೊಳ್ಳ ಶ್ರೀಮಠದ ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳು ಪೋಸ್ಟರ್ ಲಾಂಚ್ ಮಾಡಿ ಮೂರು ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು ಸಿದ್ದನಕೊಳ್ಳ ಮಠ ಕಲಾವಿದರನ್ನು ಬೆಳೆಸಿದ ಮತ್ತು ಬೆಳೆಸುವ ಕಲಾ ಪೋಷಕಮಠ. ಕಲಾ ಪ್ರತಿಭೆಗಳಿಗೆ ಇಲ್ಲಿ ಪ್ರೋತ್ಸಾಹ ಖಂಡಿತವಾಗಿ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಸರಕೋಡ ಅವರು ಗೀತೆಗಳಿಗೆ ಭಾವಪೂರ್ಣ ಅಭಿನಯವನ್ನು ಕಲಾವಿದರು ನೀಡಿದ್ದಾರೆ ಎಂದರು.

“ಮೂರು ದಿನದ ಬಾಳಿಗೆ” ಎಂಬ. ಭಾವ ಗೀತೆಗೆ ಶ್ರೀಗಳು ಭಾವ ಪೂರ್ಣ ಅಭಿನಯ ನೀಡಿದ್ದು ಜೊತೆಗೆ ಅಯ್ಯಣ್ಣಸ್ವಾಮಿ ಶ್ರೀಮತಿ ಪಾರ್ವತಿ ಗಣಾಚಾರಿ, ಭಾವನಾ ,ಬೇಬಿ ಸಹನಾ ,ಬೇಬಿ ಶ್ರೇಯಾ ,ಮಾಸ್ಟರ್ ವೀರೇಶ್ ಅಭಿನಯಿಸಿದ್ದಾರೆ, ಇನ್ನೊಂದು ಭಾವ ಗೀತೆಗೆ ಚಿತ್ರ ನಟಿ ಅಪ್ಪು ಮಂಜು ಮೂರನೇ ಗೀತೆಗೆ ಎಚ್.ವಿಜಯಲಕ್ಷ್ಮಿ (ಖುಷಿ). ಮತ್ತು ಗುರು ರಾಠೋಡ ನಟಿಸಿದ್ದಾರೆ.ಸಾಹಿತ್ಯವನ್ನು ಮಹದೇವ ಬಸರಕೋಡ ರಚಿಸಿದ್ದು, ಸಂಗೀತವನ್ನು ರಾಜೂ ಎಮ್ಮಿಗನೂರ ನೀಡಿದ್ದಾರೆ. ಮಾಲಾಶ್ರೀ ಕಣವಿ ಮತ್ತು ರವೀಂದ್ರ ಸೊರೆಗಾವಿ ಸುಮಧುರವಾಗಿ ಹಾಡಿದ್ದಾರೆ.
ರಾಜೇಶ್ ಪವಾರ ಛಾಯಾಗ್ರಹಣ, ವಿನಾಯಕ ಬಸವಾ ನೃತ್ಯ ನಿರ್ದೇಶನ, ಸಿದ್ಧಾರ್ಥ್ ಜಾಲಿಹಾಳ ಸಂಕಲನ, ದೇವು ಕಮ್ಮಾರ ಪ್ರಸಾಧನ, ನಟರಾಜ ಪತ್ತಾರ ಡಿಸೈನ್, ಡಾ, ಪ್ರಭು ಗಂಜಿಹಾಳ ,ಡಾ, ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ನಿಖಿಲ್ ಬೇಲೂರು ಮಠ, ದುರ್ಗಾದೇವಿ, ಜಿ .ಎಚ್ ಗಣೇಶ, ಜಾಧವ್, ರಾಜಪ್ಪ. ಗಜೇಂದ್ರ ಗಡ ಸಹಕಾರವಿದೆ. ಧಾರವಾಡ ಸಮೀಪದ ಮುಗದಕೆರೆ ಸುತ್ತ-ಮುತ್ತ, ಡೋರಿಕೆರೆ, ಹುಲಿಕೇರಿ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು ಮಹಾಮಹಿಮ ಲಡ್ಡು ಮುತ್ಯಾ ಚಲನ ಚಿತ್ರ ಖ್ಯಾತಿಯ ಅರವಿಂದ ಮುಳಗುಂದ ನಿರ್ದೇಶನವನ್ನು ಮಾಡಿದ್ದಾರೆ.
ಇದೆ ಸಂದರ್ಭದಲ್ಲಿ ಭಕ್ತಿ ಗೀತೆಗಳ ರಸ ಮಂಜರಿ ಜರುಗಿತು.ಚಿತ್ರನಟ, ಜ್ಯೂನಿಯರ್ ಉಪೇಂದ್ರ ವೀರೇಶ ಪುರವಂತ, ಸೌಮ್ಯ ಬಿಜಾಪುರ, ಸುಮಾ ಹಿರೇಮಠ, ಮಲ್ಲು ಅಮೀನಗಡ, ಸಂಗನಗೌಡ ಕುರುಡಗಿ ಸುಶ್ರಾವ್ಯವಾಗಿ ಹಾಡುಗಳನ್ನು ಹಾಡಿದರು, ಕಾರ್ಯಕ್ರಮದಲ್ಲಿ ಕಲಾವಿದರು, ತಂತ್ರಜ್ಞರು, ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.
*****
ಡಾ, ಪ್ರಭು ಗಂಜಿಹಾಳ
– ಮೊ:೯೪೪೮೭೭೫೩೪೬