ಸಾರಿಗೆ ಬಸ್ ಮತ್ತು ಲಾರಿ ಅಪಘಾತ, ಮಾನವೀಯತೆ ಮೆರೆದ – ಶಾಸಕ ಅಶೋಕ ಮನಗೂಳಿ.
ದೇವರ ಹಿಪ್ಪರಗಿ ಅ.05

ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಲಾರಿ ಮತ್ತು ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 20 ಕ್ಕೂ ಹೆಚ್ಚು ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾದ್ದು. ರಾತ್ರಿ 10 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು. ವಿಜಯಪುರ ದಿಂದ ದೇವರ ಹಿಪ್ಪರಗಿ ಮಾರ್ಗವಾಗಿ ಸಿಂದಗಿಗೆ ಹೋಗುವ ರಸ್ತೆ ದೇವರ ಹಿಪ್ಪರಗಿ ಹೊರ ವಲಯದಲ್ಲಿ ತುಕಾಲಿ ಢಾಭಾ ಹತ್ತಿರ.

ಲಾರಿ ಬಸ್ ಡಿಕ್ಕಿ ಸಂಭವಿಸಿದ್ದು. ಮೆಕ್ಕೆ ಜೋಳ ತುಂಬಿ ಕೊಂಡು ಹೋಗುತ್ತಿದ್ದ ಲಾರಿಗೆ ಓರ್ ಟೇಕ್ ಮಾಡಿ ವೇಗವಾಗಿ ಚಲಿಸಲು ಪ್ರಯತ್ನ ಮಾಡಿದ ಬಸ್ ಚಾಲಕ ಲಾರಿಗೆ ಬಸ್ ಡಿಕ್ಕಿ ಹೊಡೆಸಿದ್ದಾನೆ. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಹಾದು ಹೋಗುತ್ತಿದ್ದ.

ಸಿಂದಗಿ ಮತ ಕ್ಷೇತ್ರದ ಶಾಸಕ ಅಶೋಕ ಮನಗೂಳಿ. ಕೂಡಲೇ ತಮ್ಮ ವಾಹನ ನಿಲ್ಲಿಸಿ. ಘಟನೆ ನಡೆದ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ಗಾಯಳುಗಳನ್ನು. ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ರವಾನಿಸಿ ಪ್ರಯಾಣಿಕರಿಗೆ ಸಾಂತ್ವನ ಧೈರ್ಯ ತುಂಬಿ ಮಾನವೀಯತೆ ಮೆರೆದರು. ಶಾಸಕರಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ ಸಿಂದಗಿ

