ಗುಲಾಮ್ ಗಿರಿ ಹಿಮ್ಮೆಟ್ಟಿಸಲು ಸ್ವಾಭಿಮಾನ ಸಂಘಟನೆ ಕಟ್ಟಲು ಪಣ – ಡಿ.ಎಸ್.ಎಸ್ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಕರೆ.
ತುಮಕೂರು ಅ.05





ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತುಮಕೂರು ಜಿಲ್ಲಾ ಸಮಿತಿ ರಚನೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ತರೀಕೆರೆ.ಎನ್ ವೆಂಕಟೇಶ್ ರವರು ವಹಿಸಿದ್ದು. ಜಿಲ್ಲಾ ಸಂಚಾಲಕರಾಗಿ ರಾಜು ಕೊಡಲೂರು ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರಾಗಿ ಚಿಕ್ಕನಾಯಕನಹಳ್ಳಿಯ ಓಂಕಾರ್ ಮೂರ್ತಿ, ವೆಂಕಟೇಶ, ಮಧುಗಿರಿ ನಾಗರಾಜ್, ಪಾವಗಡ ಶ್ರೀನಿವಾಸ, ತುಮಕೂರು ಲಿಂಗರಾಜು ತಿಪಟೂರು ರಾಮಚಂದ್ರ, ಚಿಕ್ಕನಾಯಕನಹಳ್ಳಿ ಶಿವ್ಕುಮಾರ್ ರವರನ್ನು ಜಿಲ್ಲಾ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕ ಸಮಿತಿ ಗೆ ಮಂಜುನಾಥ ತರುಣ್ ಕುಮಾರ್ ಧರ್ಮರಾಜ್ ರವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಘಟಕಕ್ಕೆ ಶಿವಲಿಂಗಮ್ಮ ರವರನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ರಾಜಕುಮಾರ್ ಜಾಪನೂರ್, ದುರ್ಗಾ ದಾಸ್ ಆದಿ ನಾರಾಯಣ ಹಾಗೂ ಮಹಿಳಾ ಘಟಕದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ, ರಾಜ್ಯ ಸಮಿತಿ ಸದಸ್ಯರಾದ ಶಿವಮೊಗ್ಗ ನಾಗರಾಜ್, ರಾಜ್ಯ ಖಜಾಂಚಿ ಮಹಾದೇವಪ್ರಸಾದ್, ರಾಜ್ಯ ಸಂಘಟನಾ ಸಂಚಾಲಕರದ ಚಂದ್ರಮ್ಮ, ವಿಶಾಲಾಕ್ಷಿ. ಭಾರತಿ, ನವೀನ್ ಕುಮಾರ್, ಪ್ರವೀಣಕುಮಾರ್. ಮುಂತಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು