ಬಿಜೆಪಿ ಎಸ್.ಸಿ ಮೋರ್ಚಾ ಮಂಡಲ ಅಧ್ಯಕ್ಷರಾಗಿ ಡಾ. ಮಲಕಪ್ಪ.ಯ.ಬಾಗೇವಾಡಿ ನೇಮಕ.
ದೇವರ ಹಿಪ್ಪರಗಿ ಮಾರ್ಚ್.11





ಭಾರತೀಯ ಜನತಾ ಪಕ್ಷದ ದೇವರ ಹಿಪ್ಪರಗಿ ತಾಲೂಕಿನ ಎಸ್.ಸಿ ಮೋರ್ಚಾ ಮಂಡಲ ಅಧ್ಯಕ್ಷರಾಗಿ ಯುವ ನಾಯಕ ಡಾ,ಮಲಕಪ್ಪ ಯ ಬಾಗೇವಾಡಿ (ದೆವೂರ) ಅವರನ್ನು ನೇಮಕ ಮಾಡಿ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳ ಇವರ ಆದೇಶ ಮೇರಿಗೆ ದೇವರ ಹಿಪ್ಪರಗಿ ಮಂಡಲ ಅಧ್ಯಕ್ಷರಾದ ಅವ್ವಣ್ಣ ಗ್ವಾತಗಿ ಆದೇಶ ಹೊರಡಿಸಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಯುವ ನಾಯಕ ಡಾ, ಮಲಕಪ್ಪ ಬಾಗೇವಾಡಿ ಪಕ್ಷದ ತಾಲೂಕಾ ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷರಾಗಿದ್ದಕ್ಕಾಗಿ .ಪಕ್ಷದ ಕಾರ್ಯಕರ್ತರಲ್ಲಿ ಹರ್ಷ ವ್ಯಕ್ತವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಡಾ,ಮಲಕಪ್ಪ ಅವರಿಗೆ ಅಭಿನಂದನೆಗಳ ಮಹಾ ಪೂರವೇ ಹರಿದು ಬಂದಿದೆ.ದೇವರ ಹಿಪ್ಪರಗಿ ಮತ ಕ್ಷೇತ್ರದ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ್ (ಸಾಸನೂರ) ಹಾಗೂ ಪಕ್ಷದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಹಾಗೂ ದೇವರ ಹಿಪ್ಪರಗಿ ಮಂಡಲ ಅಧ್ಯಕ್ಷರಾದ ಅವ್ವಣ್ಣ ಗ್ವಾತಗಿ ಮತ್ತು ಪಕ್ಷದ ಎಲ್ಲಾ ವರಿಷ್ಠರಿಗೂ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ, ತಾಲೂಕಾ ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಡಾ, ಮಲಕಪ್ಪ ಬಾಗೇವಾಡಿ ಯವರು ಹೃದಯ ಪೂರ್ವಕ ಧನ್ಯವಾದಗಳು ಸಲ್ಲಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.