ಶ್ರೀ ಭಗೀರಥ ಉಪ್ಪಾರ ಸಂಘ ವಿಜಯಪುರ ಜಿಲ್ಲಾ – ಅಧ್ಯಕ್ಷರ ಬದಲಾವಣೆ ಕೂಗು.
ಸಾಲೋಟಗಿ ಅ.06





ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ ಭಗೀರಥ ಮಹರ್ಷಿ ಉಪ್ಪಾರ ಸೇವಾ ಸಂಘದ ಅಧ್ಯಕ್ಷರಾದ ಶಿವು ಉಪ್ಪಾರ ಯುವ ಹೋರಾಟಗಾರರು. ಉಪ್ಪಾರ ಸಮಾಜದ ಚಿಂತಕರು ಜಿಲ್ಲೆಯ ಸಮಸ್ತ ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ಧ್ವನಿ ಎತ್ತಿ ಹೋರಾಟಕ್ಕೆ ಇಳಿದ ಯುವ ಹೋರಾಟಗಾರ ಶಿವು ಉಪ್ಪಾರ. ವಿಜಯಪುರ ಜಿಲ್ಲಾ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿದ್ದಾರೆ.

ಸುಮಾರು 20 ವರ್ಷಗಳಿಂದ. ಅಧ್ಯಕ್ಷರಾಗಿ ಜಿಲ್ಲೆಯ ಸಮುದಾಯಕ್ಕೆ ಅಧ್ಯಕ್ಷರ ಚಿಂತನೆ ಮತ್ತು ಅಭಿವೃದ್ಧಿ ಜಿಲ್ಲೆಗೆ ಶೂನ್ಯ ಕೊಡುಗೆಯಾಗಿದೆ. ಎಂದು ಖಂಡಿಸಿದ ಅವರು ಉಪ್ಪಾರದ ಸಮುದಾಯಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಜಿಲ್ಲೆಯ ಪ್ರತಿಯೊಂದು ತಾಲೂಕ ಹಳ್ಳಿಗಳಲ್ಲಿ ಸಮುದಾಯದ ಜನರ ಕುಂದು ಕೊರತೆಗಳನ್ನ. ಸಮುದಾಯದ ಸಂಘಗಳನ್ನ ಭೇಟಿ ಮಾಡಿಲ್ಲ ಮತ್ತು ಸಭೆ ಸಮಾರಂಭಗಳನ್ನು ಕರೆದು ವಿಚಾರಿಸಿಲ್ಲ. ಕಾರಣ ಯುವಕರಿಗೆ ಅವಕಾಶ ಸಿಗಬೇಕು.

ಅಧ್ಯಕ್ಷರು ಬದಲಾವಣೆ ಆಗಲೇ ಬೇಕು. ಎಂದು ಶ್ರೀ ಪುರುಷೋತ್ತಾಮಾನಂದ. ಜಗದ್ಗುರುಗಳಲ್ಲಿ ಮನವಿ ಮಾಡಿ ಫೋನ್ ಕಾಲ್ ಮೂಲಕ ಮಾತನಾಡಿದ್ದು. ಬದಲಾವಣೆಗೆ ಶ್ರೀ ಗಳ ಮೂಲಕ ಮನವಿ ಮಾಡಿ ಕೊಂಡಿದ್ದಾರೆ. ತದ ನಂತರ ಜಿಲ್ಲಾ ಅಧ್ಯಕ್ಷರು. ಜಕ್ಕಪ್ಪ ಯಡವೆ ಅವರ ಜೊತೆ ಫೋನ್ ಕಾಲ್ ಮಾತನಾಡಿದ ಸಂಭಾಷಣೆ ಹಾಗೂ ಶ್ರೀಗಳ ಜೊತೆ ಮಾತನಾಡಿದ ಬಗ್ಗೆ ಸಮುದಾಯಕ್ಕೆ. ಜಿಲ್ಲಾ ಅಧ್ಯಕ್ಷರು ಬದಲಾವಣೆ. ಬದಲಾವಣೆ ಗಾಳಿ ಬೀಸಿದಾಗ ಅನಿವಾರ್ಯವಾಗಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ ಸಿಂದಗಿ