ಅಹಮ್ಮದಲಿ ಮುಲ್ಲಾ ಅವರಿಗೆ – ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ದೇವರ ಹಿಪ್ಪರಗಿ ಅ.06





ನಮ್ಮ ಕರ್ನಾಟಕ ಸೇನೆಯ ಮಾಧ್ಯಮ ಘಟಕದ ಅಧ್ಯಕ್ಷ ಅಹಮ್ಮದಲಿ ಮುಲ್ಲಾ ಅವರಿಗೆ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ.ಕರ್ನಾಟಕದ ನೆಲ, ಜಲ, ಭಾಷೆ, ಕ್ರೀಡೆ, ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ, ಕಲೆ ಸಾಮಾಜಿಕ ಹಾಗೂ ಜನಪರ ಕಾಳಜಿ ಇಟ್ಟು ನಿಸ್ವಾರ್ಥ ದಿಂದ ಸೇವೆ ಸಲ್ಲಿಸಿದ್ದಕ್ಕಾಗಿ ತಾರಾ ಕನ್ನಡ ಜನಪದ ಸಾಹಿತ್ಯ ಅಕಾಡೆಮಿ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸನ್ಮಾನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗ್ರಾಮದ ಮುಖಂಡರು, ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷರು ಹಸನ್ ನದಾಫ್ ಮತ್ತು ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್:ಎಮ್.ಬಿ ಮನಗೂಳಿ ತಾಳಿಕೋಟೆ