ಮಳೆಗೆ ಬೆಳೆ ಹಾನಿ, ಅಧಿಕಾರಿಗಳ ಸಭೆ ಕರೆಯದ ಶಾಸಕ – ನಡಹಳ್ಳಿ ಕಿಡಿ.
ಮುದ್ದೇಬಿಹಾಳ ಅ.06





ಮುದ್ದೇಬಿಹಾಳ ಕಳೆದ ಮೂರು ತಿಂಗಳ ನಿರಂತರ ಮಳೆಯಿಂದ ಬೆಳೆಗಳು ಹಾಳಾಗಿವೆ, ರೈತರು ಬೆಳೆ ಹಾನಿಯ ಸಂಕಷ್ಟದಲ್ಲಿದ್ದಾರೆ. ಶಾಸಕ ನಾಡಗೌಡರು ಅಧಿಕಾರಿಗಳ ಒಂದೇ ಒಂದು ಸಭೆ ಕರೆದಿಲ್ಲಾ ಅತ್ತ ರೈತರ ಜಮೀನುಗಳಿಗೆ ಭೇಟಿ ನೀಡದ ನಡೆ ಕ್ಷೇತ್ರದ ದುರಂತ ಎಂದು ರಾಜ್ಯ ರೈತ ಬಿಜೆಪಿ ಮೋರ್ಚಾದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಕಿಡಿ ಕಾರಿದ್ದಾರೆ. ಭಾನುವಾರ ನಾಲತವಾಡ ಹೋಬಳಿಯಲ್ಲಿ ಮಳೆಗೆ ಹಾಳಾದ ತೊಗರಿ, ಸಜ್ಜೆ, ಮೆಕ್ಕೆಜೋಳ, ಹತ್ತಿ, ಸೇರಿ ವಿವಿಧ ಬೆಳೆಗಳ ರೈತರ ಜಮೀನುಗಳಿಗೆ ಸ್ಥಳೀಯ ಬಿಜೆಪಿ ಗಣ್ಯರೊಂದಿಗೆ ವೀಕ್ಷಣೆ ಮಾಡಿ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡಿದರೆ ಬಾರ ಕೋಲಿನಿಂದ ಚಾಟಿ ಬೀಸುವ ಹೋರಾಟ ಮಾಡುವ ಪ್ಲಾನ್ ಮಾಡಿದ್ದೇವೆ. ತಾಲೂಕಿನಲ್ಲಿ ಸುಮಾರು 1.24 ಲಕ್ಷ್ಯ ಹೆಕ್ಟೇರ್ ಬಿತ್ತನೆಯಾಗಿದೆ, 80 ರಷ್ಟು ಬೆಳೆ ಹಾನಿಯಾಗಿದೆ, ನಮ್ಮ ಸರ್ಕಾರದ ಅವಧಿ 2019 ರಲ್ಲಿ ಪ್ರತಿ ಹೆಕ್ಟೇರಿಗೆ 16800 ರೂ, ನೀರಾವರಿಗೆ 23500 ರೂ ಕೊಟ್ಟಿದ್ದೇವೆ ತೋಟಗಾರಿಕೆ ಬೆಳೆಗೆ 28,000 ರೂಗಳನ್ನು ನೀಡಿದ್ದೇವೆ ಮನೆಗಳಿಗೆ 80 ರಷ್ಟು ಹಾನಿಯಾಗಿದ್ದರೆ 5 ಲಕ್ಷ ನೀಡಿದ್ದೇವೆ ಎಂದರು. ಹೀಗಾಗಿ ಶೀಘ್ರವೇ ಕಾಂಗ್ರೆಸ್ ಸರ್ಕಾರ ಪ್ರತಿ ಎಕರೆಗೆ 25,000 ಕೊಡಬೇಕು ಎಂದರು. ತಾಲೂಕಿನ ನಾಗಬೇನಾಳ ಗ್ರಾಮಕ್ಕೆ ಭೇಟಿ ನೀಡಿದ ಅವರು ಕಳೆದ ಒಂದು ತಿಂಗಳಿನಿಂದ ನಾಗಭೇನಾಳದ ರೈತರ ಸುಮಾರು 18 ಕುರಿಗಳು ಸತ್ತು ತಿಂಗಳು ಕಳೆದಿವೆ, ಆದರೆ ಶಾಸಕರು ಗಮನ ಹರಿಸುತ್ತಿಲ್ಲ, ಕಂದಾಯ ಇಲಾಖೆಯವರು ಸತ್ತ ಕುರಿಗಳಿಗೆ ಪರಿಹಾರ ಇಲ್ಲ ಎಂದು ಪತ್ರ ನೀಡಿದ್ದಾರೆ. ಇದೆಂಥ ಆಡಳಿತ ಎಂದು ನಡಹಳ್ಳಿಯವರು ಕಿಡಿ ಕಾರಿದರು. ಇದೇ ವೇಳೆಯಲ್ಲಿ ಬಿಜೆಪಿ ಧುರೀಣ ಜಿಪಂ ಮಾಜಿ ಅಧ್ಯಕ್ಷರಾದ ಮುನ್ನಾಧಣಿ ನಾಡಗೌಡ ಮಾತನಾಡಿದರು. ಈ ವೇಳೆ ಜಿ.ಪ ಮಾಜಿ ಉಪಾಧ್ಯಕ್ಷರಾದ ಕೆ,ಆರ್ ಬಿರಾದಾರ್, ಎಂ,ಎಸ್ ಪಾಟೀಲ್, ಮುತ್ತು ಅಂಗಡಿ, ಶಶಿ ಬಂಗಾರಿ, ಈರಣ್ಣ ಮುದ್ನೂರ್, ಗಿರೀಶ್ ಗೌಡ ಪಾಟೀಲ ಮುರಾಳ್ , ಮಾತನಾಡಿದರು. ಜಗದೀಶ್ ಪಂಪನವರ್, ಸಂಜು ಬಾಗೇವಾಡಿ, ಸಂಗಮೇಶ್ ಗುಂಡಕನಾಳ, ಸಂಗಮೇಶ್ ಮೇಟಿ,ಸಂಗನಗೌಡ ಕುಳಗೇರಿ, ಬಾಪುಗೌಡ ಪಾಟೀಲ, ರಾಮನಗೌಡ ಹಂಪನಗೌಡರ, ಚಂದ್ರು ಹಂಪನಗೌಡರ, ವೀರೇಶ್ ಚಲವಾದಿ,ಚಂದ್ರು ಗಂಗನಗೌಡ, ಶಂಕರ್ ಗೌಡ ಶಿವಣಗಿ, ಮುದುಕಣ್ಣ ಗಂಗನಗೌಡರ, ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ