ಪ್ರಾಂಜಲ ಮನಸ್ಸಿನಿಂದ ಒಮ್ಮೆ ಇತಿಹಾಸ – ನೋಡಿ ಮೀಸಲಾತಿ ನೀಡಿ.
ಕೊಪ್ಪಳ ಅ.08





ಇಂದಿನ ಈ ದಲಿತ ಸಂಘರ್ಷ ಸಮಿತಿಯ ಮಾನ್ಯ ಎನ್.ಮೂರ್ತಿ ರಾಜ್ಯಧ್ಯಕ್ಷರು ಹಾಗೂ ಆರ್,ಪಿ,ಐ ನ (ಬಿ )ರಾಷ್ಟಿಯ್ ಅಧ್ಯಕ್ಷರು ಹಾಗೂ ಸಂಘಟನೆ ಸ್ಥಾಪಿತರು ಆದ ಮಾನ್ಯರ ಆದೇಶದಂತೆ ಇಂದಿನ ರಾಜ್ಯ ಸಮಿತಿಯ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆದ ಹೋರಾಟದ ಪ್ರಕಾರ ಇಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಅಲೆಮಾರಿ 59 ಜಾತಿಗಳಿಗೆ 1 ರಷ್ಟು ಮೀಸಲಾತಿ ಆಗ್ರಹಿಸಿ ನಡೆದ ಈ ಹೋರಾಟದಲ್ಲಿ sc/st ಅಲೆಮಾರಿ ಬುಡಕಟ್ಟು ಮಹಾಸಭಾದ, ಜಿಲ್ಲಾ ಸಮಿತಿ ಹಾಗೂ ಬುಡುಗ ಜಂಗಮ, ಸುಡುಗಾಡು ಸಿದ್ದರು ಹಾಗೂ ಇನ್ನುಳಿದಂತೆ, ಚೆನ್ನದಾಸರ ಸಮುದಾಯದ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಮುಖಂಡರುಗಳು ಸೇರಿದ್ದರು. ಈ ವೇಳೆಯಲ್ಲಿ, ಅಲೆಮಾರಿ ಜಿಲ್ಲಾ ಅಧ್ಯಕ್ಷರು, ಹಾಗೂ ಚೆನ್ನದಾಸರ ಸಮುದಾಯದ ಜಿಲ್ಲಾ ಮುಖಂಡರು ಆದ ಸಂಜಯದಾಸ್ ಕೌಜಗೇರಿ ಮಾತನಾಡಿ, ಈ ಒಂದು ಅಲೆಮಾರಿ 59 ಸಮುದಾಯಗಳಲ್ಲಿ ಸೇರಿಸಿದ 49 ಸಮುದಾಯದಲ್ಲಿ ಬರುವ ಹಾಗೂ 10 ರಲ್ಲಿ ಬರುವ ಸಮುದಾಯದಲ್ಲಿ ಕೆಲ ಪ್ರಮುಖ ಲೋಪ ದೋಷಗಳಿವೆ, ಇದರಲ್ಲಿ, ಈ ಬಲಿಷ್ಠ ಕೊರಮ ಕೊರಚ ಹಾಗೂ ಲಂಬಾಣಿ ಬೋವಿ ಸಮುದಾಯವಲ್ಲದೆ, ಎಡ ಮತ್ತು ಬಲ ಪಂತಿಯ ದಲಿತ ಸಮುದಾಯಗಳಲ್ಲಿ ಮೂಲ ದಲಿತ ಸಮುದಾಯದಲ್ಲಿ ಬರುವ ದಕ್ಕಲಿಗ, ಚೆನ್ನದಾಸರ, ಹೊಲೆಯ ದಾಸರ ದಾಸರಿ ಮಾಲಾ ದಾಸರ, ದಾಸರಿ ಸಮುದಾಯಗಳು ಮೂಲ ಅಲೆಮಾರಿಗಳಲ್ಲ ಇವುಗಳು ಮೂಲ ದಲಿತ ಸಂಬಂಧಿತ ಸಮುದಾಯಗಳು ಇವು ನಾವುಗಳು ಯಾರೋ ಹೇಳುತ್ತಿರೋದಲ್ಲ, ಇತಿಹಾಸದಲ್ಲಿ ಇದೆ, ಎ.ಜೆ ಸದಾಶಿವ ವರದಿಯಲ್ಲಿದೆ ಇವುಗಳೆಲ್ಲವನ್ನು ಬೇರೆ ಪಡಿಸಿ ಮೂಲ ಅಸ್ಪೃಶ್ಯ ಅಲೆಮಾರಿ ಮುಟ್ಟುಸಿ ಕೊಳ್ಳದ ಸಮುದಾಯಗಳನ್ನು ಮುಟ್ಟುಸಿ ಕೊಳ್ಳದವರಿಂದ ಬೇರೆ ಮಾಡಿ ಉಳಿದ ಸುಮಾರು 49 ಸಮುದಾಯಗಳಿಗೆ 1% ಮೀಸಲಾತಿ ನೀಡಬೇಕೆಂದು ಹೇಳಿದರು. ಈ ಸಮಯದಲ್ಲಿ, ಬಸವರಾಜ್ ವಿಭೂತಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷರು, ಮರೀಸ್ವಾಮಿ ಕನಕಗಿರಿ ರಾಮಲಿಂಗಯ್ಯ್, ಮೌನೇಶ್ ಚೆನ್ನದಾಸರ, ಗವಿಶಿದ್ದಪ್ಪ ಚೆಕೇನಕೊಪ್ಪ, ಹಾಗೂ ಸಂಜಯದಾಸ್ ಕೌಜಗೇರಿ ಮತ್ತು ಸಮಸ್ತ ಅಲೆಮಾರಿ ಸಮುದಾಯದ ಹಾಗು ದಲಿತ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.