ಭಾರತ ದೇಶದಲ್ಲಿ ಮಹಾನ್ ಕವಿ ಯಾರಾದ್ರೂ ಇದ್ರೆ ಅದು – ಮಹರ್ಷಿ ವಾಲ್ಮೀಕಿ ಎಂದ ಶಾಸಕ ಜಿ.ಎಸ್ ಪಾಟೀಲ್.
ರೋಣ ಅ.09





ರಾಮಾಯಣ ಮಹಾಕಾವ್ಯ ರಚಿಸಿದವರು ಮಹರ್ಷಿ ವಾಲ್ಮೀಕಿ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ,ಭಾರತ ದೇಶದ ಮಹಾನ್ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ, ಆದಿಕವಿಯ ತತ್ವಾದರ್ಶ ಅಳವಡಿಸಿ ಕೊಳ್ಳೋಣ ಎಂದು ಶಾಸಕ ಜಿ.ಎಸ್ ಪಾಟೀಲ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಬಡವರಿಗೆ, ಬುಡಕಟ್ಟು ಜನಾಂಗದವರಿಗೆ ವಿಶೇಷ ಸೌಲಭ್ಯಗಳನ್ನು ನಮ್ಮ ಸರ್ಕಾರ ನೀಡಿದೆ ಇವತ್ತಿನ ನಮ್ಮ ಕಾಂಗ್ರೆಸ್ ಸರ್ಕಾರ ಡಾ, ಬಿ.ಆರ್ ಅಂಬೇಡ್ಕರವರು ಕಂಡ ಕನಸನ್ನು ನನಸು ಮಾಡಲು ಮುಂದಾಗಿದೆ. ಇವತ್ತು ಭಾರತ ದೇಶದಲ್ಲಿ ಮಹಾನ್ ಕವಿ ಯಾರಾದ್ರೂ ಇದ್ರೆ ಅದು ಮಹರ್ಷಿ ವಾಲ್ಮೀಕಿ. ಮಹರ್ಷಿ ವಾಲ್ಮೀಕಿ ಒಂದೇ ಜನಾಂಗಕ್ಕೆ ಸೇರಿದವರಲ್ಲ ಅವರ ವಿಚಾರಗಳನ್ನು ರಾಮಾಯಣದ ಮೂಲಕ ಇಡೀ ದೇಶಕ್ಕೆ ತಿಳಿಯುವಂತೆ ಮಾಡಿದವರು. ಪ್ರತಿ ವರ್ಷ ಜಯಂತಿಯನ್ನು ಮೆರವಣಿಗೆ ಮಾಡಿದ ನಂತರ ಕಾರ್ಯಕ್ರಮ ಮಾಡುತ್ತಿದ್ದೆವು ಆದ್ರೆ ಈ ವರ್ಷ ಕಾರ್ಯಕ್ರಮ ಮಾಡಿದ ನಂತರ ಮೆರವಣಿಗೆ ಮಾಡಲು ಮುಂದಾದೆವು ಯಾಕಂದ್ರೆ. ಮೆರವಣಿಗೆ ಮಾಡುವುದು ಕ್ಕಿಂತ ಮಹರ್ಷಿ ವಾಲ್ಮೀಕಿಯವರ ಚರಿತ್ರೆ ತಿಳಿಯುವದು ತುಂಬಾ ಮುಖ್ಯ ಆಗಾಗಿ ಈ ಒಂದು ಬದಲಾವಣೆ.ಇವತ್ತಿನ ಈ ದಿನ ನಮಗೆ ನಂತಸ ತಂದಿದೆ ಎಂದು ಹೇಳಿದರು.
ಉಪನ್ಯಾಸಕ ಟಿ.ಪಿ ಬಸವರಾಜ ಮಾತನಾಡಿ ವಾಲ್ಮೀಕಿ ಮಹರ್ಷಿಗಳ ಇತಿಹಾಸ ಮತ್ತು ರಾಮಾಯಣದ ಬಗ್ಗೆ ಉಪನ್ಯಾಸ ಮಾಡಿದರು.
ವಾಲ್ಮೀಕಿ ಸಂಘದ ತಾಲೂಕಾಧ್ಯಕ್ಷ ಬಸುವರಾಜ್ ತಳವಾರ ವಾಲ್ಮೀಕಿ ಮುಖಂಡರೊಂದಿಗೆ ಪರಿಶಿಷ್ಟ ಪಂಗಡದ ವಸತಿ ಗೃಹ ಹಾಗೂ ವಸತಿ ಶಾಲೆ ಕಲ್ಪಿಸಬೇಕು. ನಕಲಿ ಜಾತಿ ಪ್ರಮಾಣ ಪತ್ರ ಪೂರೈಸುವ ಅಧಿಕಾರಿಗಳಿಗೆ ಮತ್ತು ಪಡೆದ ವ್ಯಕ್ತಿಗಳಿಗೆ ಸೂಕ್ತ ಕ್ರಮಕ್ಕೆ ಆಗ್ರಹ ಸೇರಿದಂತೆ ಇನ್ನೂ ಅನೇಕ ವಿಷಯದ ಕುರಿತು ತಾಲೂಕಿನ ಎಲ್ಲಾ ವಾಲ್ಮೀಕಿ ಸಮುದಾಯದವರು ಕಾರ್ಯಕ್ರಮದ ವೇದಿಕೆ ಮೇಲೆ ಶಾಸಕರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮ ಮುಗಿದ ಬಳಿಕ ಮಹರ್ಷಿಯವರ ಮೆರವಣಿಗೆ ಪಟ್ಟಣದ ಗಜೇಂದ್ರಗಡ ರಸ್ತೆಯ ಸಿದ್ದಾರೂಢ ಮಠದಿಂದ ತಹಶೀಲ್ದಾರ ಕಚೇರಿಯ ವರೆಗೆ ಡೊಳ್ಳು ಮೇಳದೊಂದಿಗೆ ವಿಜೃಂಭಣೆಯಿಂದ ನೆರವೇರಿದ್ದು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ನಾಗರಾಜ ಕೆ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, , ಸಿಪಿಐ ಸಿದ್ದಪ್ಪ ಬೀಳಗಿ, ರೋಣ ಠಾಣಾ ಪಿ.ಎಸ್.ಐ ಪ್ರಕಾಶ ಬಣಕಾರ. ನರೇಗಲ್ ಠಾಣಾ ಪಿ.ಎಸ್.ಐ ಐಶ್ವರ್ಯ ನಾಗರಾಳ. ಪುರಸಭೆ ಮುಖ್ಯಾಧಿಕಾರಿ ರಮೇಶ್ ಹೊಸಮನಿ, ಮಂಜುಳಾ ಹುಲ್ಲಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಾಂಭೋಗಿ, ಉಪನ್ಯಾಸ ಟಿ.ಪಿ ಬಸವರಾಜ, ಸುವರ್ಣ ತಳವಾರ, ವಿ.ಬಿ ಸೋಮನಕಟ್ಟಿಮಠ, ಬಸಣ್ಣ ನವಲಗುಂದ, ಸಂಜಯ ದೊಡ್ಡಮನಿ, ಪಿಡಬ್ಲ್ಯೂಡಿ ಎಇಇ ಜಿ ಎಸ್ ಪಾಟೀಲ, ಸಂತೋಷ ಕಡಿವಾಲ, ಹಣಮಂತ ದ್ವಸಲ.ಸಂತೋಷ ಕಾಲ್ಟಟ್ಟಿ, ಅಶೋಕ ಜಿಗಳೂರ, ಭೀಮಣ್ಣ ತಳವಾರ, ಕೃಷಿ ನಿರ್ದೇಶಕ ಎಚ್.ಎಫ್ ತಹಶೀಲ್ದಾರ,ಮುತ್ತಣ್ಣ ತಳವಾರ. ಹನುಮೇಶ್ ಕಟ್ನಳ್ಳಿ.ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಗೀತಾ ಆಲೂರು. ತಾಲೂಕಿನ ದಲಿತ ಮುಖಂಡರು. ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.