“ಜ್ಞಾನವು ಬಾಳಿನ ಅಂದಕಾರ ಕಳೆವ ಅಕ್ಷವು”…..

ಮೌನವೇ ಕಲಹ ಕಳೆವ ಹೊಂಗಿರ




ಣಮೆಚ್ಚುಗೆಯ ನುಡಿ ಸಿಹಿ ಹೂರಣ
ದ್ವೇಷ ರೋಷ ಬೆಸಿಗೆಯ ರಣಕಣ
ನಿತ್ಯವು ತಮ ಕಳೆದು ಬೆಳಕು ಚೆಲ್ಲುವ
ಸೂರ್ಯ ಕಿರಣ
ನ್ಯಾಯ ನೀತಿ ಧರ್ಮ ಮಾನವನ ನಿಜ
ಆಭರಣ
ಸಂಸ್ಕಾರ ಸಂಸ್ಕೃತಿ ಮನೆಯ ಭರಣ
ನಡೆ ನುಡಿ ಒಂದಾಗಿಸುವವನೇ ಶರಣ
ಶುಚಿಗೆ ರುಚಿಗೆ ಅನುಸಾರ ಇರಬೇಕು ಲವಣ
ನಿಧಾನ ಮುನ್ನಚ್ಚೆರಿಕೆ ಪ್ರಧಾನವಾಗಿರಲಿ
ಪಯಣದಲಿ
ಬಾಳಿನಲಿ ಶುಭ ಸಿಹಿ ವಿನಿಮಯವೇ ಔತಣವು
ಮೌಢ್ಯತೆಯ ಅನುಮಾನವೇ ಕಲಹ
ಉಲ್ಬಣವು
ಏಳ್ಗೆಗೆ ಕಾರಣರಾದವರು ಮನದಲಿ ನೆನಹು
ಮಧುರ ಕ್ಷಣವು
ಸಕಲ ಜೀವಿಗಳೆಲ್ಲರಲಿ ಇರಲಿ ಕರುಣ ಗುಣವು
ತಂದೆ ತಾಯಿ ಭೂವಿಯ ಜೀವಮಾನದಲಿ
ತೀರಿಸಲಾಗದ ಋಣಗಳು
ಸದಾ ಸ್ವಾಭಿಮಾನತನವು ಇರಲಿ ಅನುಕ್ಷಣವು
ಜ್ಞಾನವು ಬಾಳಿನ ಅಂದಕಾರ ಕಳೆವ ಅಕ್ಷವು
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ