ಯಾವ ಜಂಟಿ ಸಮೀಕ್ಷೆ ಮಾಡುವುದು ಅವಶ್ಯಕತೆ ಇಲ್ಲಾ ಪ್ರತಿ ಎಕರೆಗೆ ₹50,000 ಪರಿಹಾರ ಕೊಡುವಂತೆ – ರೈತರಿಂದ ಒಕ್ಕೊರಲಿನಿಂದ ಆಗ್ರಹ.
ತಾಳಿಕೋಟೆ ಅ.11





ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಪ್ರತಿ ಹಳ್ಳಿಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಎಲ್ಲಾ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ.
ಜಂಟಿ ಸಮೀಕ್ಷೆಯ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ ₹50,000 ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ ರೂಪಾಯಿ ಹಾಗೆ ಬಹು ವಾರ್ಷಿಕ ಬೆಳೆಗಳಿಗೆ 2 ₹ಲಕ್ಷ ಪರಿಹಾರವನ್ನು ಕೊಡಬೇಕೆಂದು ಈ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಆಗ್ರಹ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಳಿಕೋಟೆ ತಾಲೂಕು ದಂಡಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ವಿಪರೀತ ಮಳೆಯಿಂದಾಗಿ ತಾಲೂಕಿನ ಕೃಷಿ ಬೆಳೆಗಳಾದ ತೊಗರಿ ಹತ್ತಿ ಮೆಕ್ಕೆಜೋಳ ಸಜ್ಜಿ ಸೇರಿದಂತೆ ಎಲ್ಲಾ ಬೆಳೆಗಳು ಹಾಳಾಗಿವೆ. ದ್ರಾಕ್ಷಿ ದಾಳಿಂಬ್ರಿ ಲಿಂಬೆ, ಬಾಳೆ ಸೇರಿದಂತೆ ಎಲ್ಲಾ ಬೆಳೆಗಳು ನೀರಲ್ಲಿ ನಿಂತು ಹಾಳಾಗಿವೆ ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ 15 ದಿನದ ಒಳಗಾಗಿ ಜಿಲ್ಲೆಯ ಎಲ್ಲರಿಗೂ ಪರಿಹಾರ ಕೊಡಲೇ ಬೇಕೆಂದು ಒತ್ತಾಯ ಮಾಡಲಾಯಿತು.
ಎಲ್ಲಾ ಬೆಳೆಗಳು ಕೂಡ ನಷ್ಟ ಗೊಂಡಿರುವ ಹಿನ್ನೆಲೆಯಲ್ಲಿ ಯಾರಿಗೂ ತಾರತಮ್ಯ ಮಾಡದೆ ಎಲ್ಲರಿಗೂ ನಷ್ಟದ ಪರಿಹಾರವನ್ನು ಹಾಕಬೇಕು ಅದೇ ರೀತಿಯಾಗಿ ಫಸಲು ಭೀಮಾ ಯೋಜನೆಯ ವಿಮೇವೂ ಕೂಡ ಆದಷ್ಟು ಬೇಗನೆ ಕೊಡ ಬೇಕೆಂದರು.
ತಾಲೂಕ ಅಧ್ಯಕ್ಷರಾದ ಶ್ರೀಶೈಲ್ ವಾಲಿಕಾರ ಅವರು ಮಾತ್ನಾಡುತ್ತಾ ಭೀಮೆ, ಕೃಷ್ಣಾ ಹಾಗೂ ದೋಣಿಯ ಪ್ರವಾಹದಿಂದಾಗಿ ಸಾಕಷ್ಟು ರೈತರ ಕೃಷಿ ಭೂಮಿಗಳ ಬೆಳೆಗಳು ಹಾಳಾಗಿರುವ ಜೊತೆಗೆ ಮನೆ ಮಠಗಳು ಕೂಡ ಬಿದ್ದು ಹಲವಾರು ಪ್ರಾಣಿಗಳು ಕೂಡ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿವೆ ಇದಕ್ಕೆಲ್ಲಾ ಪರಿಹಾರ ನೀಡಬೇಕೆಂದು ಆಗ್ರಹ ಮಾಡುತ್ತಿದ್ದೇವೆ ಒಂದು ವೇಳೆ ತಡವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಮಹಿಳಾ ಘಟಕದ ತಾಲೂಕಾ ಅಧ್ಯಕ್ಷರಾದ ಸುಜಾತಾ ಅವಟಿ ಅವರು ಮಾತನಾಡುತ್ತ ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿ ಕಣ್ಣಿಗೆ ಕಾಣಬರುವ ಕೆಲವೇ ರೈತರಿಗೆ ನಷ್ಟ ಪರಿಹಾರ ಕೊಡುವುದಾಗಿ ವರದಿ ತಯಾರಿಸಿದ್ದೀರಿ ಆದರೆ ತಾಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಮಳೆಯಿಂದ ನಷ್ಟವಾಗಿದೆ. ಅವರೆಲ್ಲರಿಗೂ ಮತ್ತೊಮೆ ಸಮೀಕ್ಷೆ ಮಾಡಿ ಅವರಿಗೂ ಪರಿಹಾರ ಕೊಡಿ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅವರು ಈಗಾಗಲೇ ಮೊದಲೇ ಹಂತದ ಡೋಣಿ ಇಂದ ನಷ್ಟ ಗೊಂಡ ರೈತರಿಗೆ ಪರಿಹಾರಕ್ಕೆ ಗುರುತಿಸಲಾಗಿತ್ತು, ಮತ್ತೆ ಇತ್ತೀಚಿಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ನೀರು ನಿಂತು ಬೆಳೆ ನಷ್ಟ ಗೊಂಡಿರುವ ಕುರಿತು ಪ್ರಥಮ ವರದಿಯನ್ನು ಆಯಾ ಗ್ರಾಮ ಪಂಚಾಯತ ಅಥವಾ ತಲಾಟಿ ಕಚೇರಿ ಮುಂದೆ ಅಂಟಿಸಲಾಗಿದೆ. ಇನ್ನೂ ಯಾವ ರೈತರು ನಷ್ಟ ಗೊಂಡು ಉಳಿದಿದ್ದರೆ ಅಂಥವರು ದಾಖಲೆಗಳನ್ನು ಕೊಡುವಂತೆ ತಿಳಿಸಿದರು.
ಈ ವೇಳೆ ಬಾಗೇವಾಡಿ ತಾಲೂಕಾ ಅಧ್ಯಕ್ಷರಾದ ಮುದಕಣ್ಣ ಬಾಗೇವಾಡಿ, ನಿಂಗಣ್ಣ ಸುಣದಳ್ಳಿ ಈರಯ್ಯ ಅಲಾಳಮಠ, ಶಿವಶಂಕ್ರಪ್ಪ ಸಜ್ಜನ್, ಲಿಂಗರಾಜ ಮೇಟಿ, ರಮೇಶಗೌಡ ವಡವಡಗಿ, ದೇವರೆಡ್ಡಿ ಬಿರಾದಾರ, ದೇವೀಂದ್ರಪ್ಪಗೌಡ್ ಪಾಟೀಲ್, ಮಹದೇಪ್ಪಾಗೌಡ ಜಲಪುರ್, ದೇವಿಡ್ರಪ್ಪಾಗೌಡ ಕೊನಾಳ, ಸಂಗನಗೌಡ ಬೆಂಡೆಗೊಂದಳ, ಈರಣ್ಣ ಸಿಂಪಿಗೆರೆ, ಮಡಿವಾಳಪ್ಪ ಸಿಂಪಿಗೆರೆ, ಶಿವಾಜಿ ಮೊಪಗಾರ, ಸಿದ್ದಪ್ಪತಳವಾರ್, ಅಪ್ಪಸಾಹೇಬ್ ಸಜ್ಜನ್, ಮುರ್ತುಜ ಹಳ್ಳದಮನಿ. ಮಲ್ಲು ಮುದನೂರ್, ಅಪ್ಪಯ್ಯ ಕಾರಕಳ್ಳಿಮಠ. ಶಿವಶಂಕರಪ್ಪ ಟಕಳಕ್ಕಿ, ಬಸವರಾಜ್ ನಾಟಿಕಾರ್, ಭೀಮಣ್ಣ ಸಜ್ಜನ, ಬೋರಮ್ಮ ಕುಂಬಾರ, ಸುಧಾ ಮಡ್ಡಿ, ದ್ರಾಕ್ಷಿಯಿಣಿ ಲಿಂಗದಳ್ಳಿ,ವಿ ರೇಣುಕಾ ಹಂಚಾಟೆ, ಲಕ್ಷ್ಮಿಬಾಯಿ ಸಜ್ಜನ ಸೇರಿದಂತೆ ನೂರಾರು, ರೈತರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಮ್.ಬಿ ಮನಗೂಳಿ.ತಾಳಿಕೋಟೆ