ಬೆಳೆ ಸಮೀಕ್ಷೆದಾರರ ಸಂಘದಿಂದ – ಪದಾಧಿಕಾರಿಗಳು ಆಯ್ಕೆ.
ದೇವರ ಹಿಪ್ಪರಗಿ ಅ.12





ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ ರಿ ವಿಜಯಪುರ, ಸಂಸ್ಥಾಪಕರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜು ರಾಜ್ಯಾಧ್ಯಕ್ಷರಾದ ಮಧುಚಂದ್ರ ಎಮ್.ಮಹದೇವಯ್ಯ ಇವರ ಆದೇಶದ ಮೇರೆಗೆ ಹಾಗೂ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ನರಸಪ್ಪ ನಾವಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಭೀಮಪ್ಪ ತಳವಾರ ಹಾಗೂ ಜಿಲ್ಲಾ ಘಟಕ ದ ಸಂಘಟನಾ ಕಾರ್ಯದರ್ಶಿ ಗಳಾದ ಸದಾಶಿವ ಚಲವಾದಿ ಇವರ ಸಂಯೋಗ ದಲ್ಲಿ ದೇವರ ಹಿಪ್ಪರಗಿ ತಾಲ್ಲೂಕು ಬೆಳೆ ಸಮೀಕ್ಷೆದಾರರ ಸಂಘ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ತಾಲ್ಲೂಕು ಪ್ರವಾಸ ಮಂದಿರ ದಲ್ಲಿ ನಡೆಯಿತು.

ತಾಲ್ಲೂಕು ಅಧ್ಯಕ್ಷರಾಗಿ ಶಿವಾನಂದ ಇಂಗಳಗಿ ಗೌರವ ಅಧ್ಯಕ್ಷರಾಗಿ ಸೋಮಶೇಖರ್ ನಾಯ್ಕಾಡಿ ಉಪಾಧ್ಯಕ್ಷರಾಗಿ ಮಂಜು ಹಲ್ಯಾಳ ಪ್ರಧಾನ ಕಾರ್ಯದರ್ಶಿಯಾಗಿ ರಾಜು ರಾಠೋಡ ಖಂಜಾಚಿಯಾಗಿ ಗೋಪಾಲ ಹೊಸೂರ ಸಹ ಕಾರ್ಯದರ್ಶಿಯಾಗಿ ಮಲ್ಲಿಕಸಾಬ್ ವಾಲಿಕಾರ ಇವರನ್ನು ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಿ ತಾಲ್ಲೂಕಿನಲ್ಲಿ ನಮ್ಮ ಸಂಘಟನೆ ಸರಿಯಾಗಿ ನಡೆಸಿಕೊಂಡು ಹೋಗಬೇಕು ಹಾಗೂ ಸಂಘದ ನೇಮದ ಪ್ರಕಾರ ನಡೆಯಬೇಕು ಎಂದು ಜಿಲ್ಲಾ ಅಧ್ಯಕ್ಷರು ಹೇಳಿದರು ಹಾಗೂ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ವಿಶೇಷ ಸನ್ಮಾನ ಜಿಲ್ಲಾ ಪದಾಧಿಕಾರಿಗಳು ಮಾಡಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ