ವನಸಿರಿ ಪೌಂಡೇಷನ್ ಸಂಸ್ಥೆ ಪ್ರತಿನಿತ್ಯ ಪರಿಸರ ಸಂರಕ್ಷಣೆಯಲ್ಲಿ ತೊಡಗಿದೆ ಎಂದ – ಅಮರೇಗೌಡ ಮಲ್ಲಾಪುರ.

ಸಿಂಧನೂರು ಅ.13

ಸಿಂಧನೂರಿನ ವನಸಿರಿ ಪೌಂಡೇಷನ್ ಸಂಸ್ಥೆಯ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಶ್ರೀ ಆದಿತ್ಯ ಸ್ವತಂತ್ರ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ NSS ವಿದ್ಯಾರ್ಥಿಗಳು ಇಂದು ಭೇಟಿ ನೀಡಿದರು.ಟ್ರಾಫಿಕ್ ಪೊಲೀಸ್ ಠಾಣೆ ಆವರಣ,ಮತ್ತು ಮರು ಜೀವ ಪಡೆದ ಆಲದ ಮರದ ಸುತ್ತಮುತ್ತ ಸ್ವಚ್ಛತೆ ಮಾಡಿ ಆವರಣದಲ್ಲಿರುವ ನೂರಾರು ಗಿಡಗಳ ಟ್ರಿಮ್ಮಿಂಗ್, ಪಾತಿ ಮಾಡಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಕೊಂಡರು.

ಈ ಸಂಧರ್ಭದಲ್ಲಿ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ವನಸಿರಿ ಪೌಂಡೇಷನ್ ಸಂಸ್ಥೆ ಸುಮಾರು 10 ವರ್ಷಗಳಿಂದ ಪರಿಸರ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿ ಕೊಂಡಿದೆ. ಇದಕ್ಕೂ ಮೊದಲು ಚಲನ ಚಿತ್ರ ನಟರಾದ ಯಶ್ ಅವರು ಸ್ಥಾಪಿಸಿದ ಯಶೋ ಮಾರ್ಗ ಎಂಬ ಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಕಾರ್ಯ ನಿರ್ವಹಿಸುತ್ತಿದ್ದೆವು. ನಮಗೆಲ್ಲ ಚಲನ ಚಿತ್ರ ನಟ ಯಶ್ ಅವರು ಮಾರ್ಗದಶಕರಾಗಿದ್ದಾರೆ. ನಮ್ಮ ವನಸಿರಿ ಸಂಸ್ಥೆ ವೃಕ್ಷ ಬಂಧನ, ಪರಿಸರ ಸ್ನೇಹಿ ಬೀಜ ಗಣಪತಿ, ಏಪ್ರಿಲ್ ಕೂಲ್ ಕಾರ್ಯಕ್ರಮ, ತಾಯಿಗೊಂದು ಮರ, ಅಪ್ಪಿಕೋ ಚಳುವಳಿಯ ಮೂಲಕ ಪರಿಸರ ಜಾಗೃತಿಯಲ್ಲಿ ತೊಡಗಿದ್ದೇವೆ ಜೊತೆಗೆ, ಹುಟ್ಟುಹಬ್ಬ, ಮದುವೆ ಸಮಾರಂಭಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದೇವೆ. ಇಂದು ಸಿಂಧನೂರು ಹಸಿರುನಿಂದ ಕಂಗೊಳಿಸುತ್ತಿದೆ. ಇವತ್ತು ವನಸಿರಿ ಪೌಂಡೇಷನ್ ಸಂಸ್ಥೆ ರಾಜ್ಯ ಮಟ್ಟದಲ್ಲಿ ಗುರುತಿಸಲು ಕಾರಣರೆಂದರೆ ಅದಕ್ಕೆ ನಿಮ್ಮಂತಹ ವಿದ್ಯಾರ್ಥಿಗಳಿಂದ ಅದಕ್ಕೆ ತಮಗೆಲ್ಲರಿಗೂ ವನಸಿರಿ ಪೌಂಡೇಷನ್ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಆದಿತ್ಯ ಕಾಲೇಜಿನ ಅಧ್ಯಕ್ಷರಾದ ಶ್ರೀ ಸುರೇಶ್ ರೆಡ್ಡಿ, ವನಸಿರಿ ಪೌಂಡೇಷನ್ ಸಂಸ್ಥೆಯ ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ಚನ್ನಪ್ಪ ಕೆ ಹೊಸಹಳ್ಳಿ, ಸದಸ್ಯ ಮುದುಕಪ್ಪ ಹೊಸಳ್ಳಿ ಕ್ಯಾಂಪ್,ಹನುಮಂತ ಬಸವ ಹೂವಿನಬಾವಿ ಹಾಗೂ ಪ್ರಾಂಶುಪಾಲರು,ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button