🚨 ಬಿಗ್ ಬ್ರೇಕಿಂಗ್ ನ್ಯೂಸ್ | ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ 🚨ಉಡುಪಿ RTO ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ, ಇದು ‘ನಾಟಕವೇ’ ಅಥವಾ ‘ಪ್ರಾಮಾಣಿಕ ಕ್ರಮವೇ’…? – ಸಾರ್ವಜನಿಕರಲ್ಲಿ ಭಾರೀ ಸಂಶಯ..!
ಉಡುಪಿ/ಮಂಗಳೂರು ಅ.14

ಭ್ರಷ್ಟಾಚಾರದ ಆರೋಪದ ಮೇಲೆ ಉಡುಪಿ RTO ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಡೆಸಿದ ಮಂಗಳವಾರದ (ಅ.14, 2025) ದಾಳಿ ರಾಜ್ಯಾದ್ಯಂತ ಸುದ್ದಿಯಾಗಿದ್ದರೂ, ಇದೀಗ ಈ ದಾಳಿಯ ಉದ್ದೇಶದ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಭಾರೀ ಅನುಮಾನದ ಕಾರ್ಮೋಡಗಳು ಕವಿದಿವೆ.
ಸ್ಥಳೀಯರು ಮತ್ತು ಸಾಮಾನ್ಯ ನಾಗರಿಕರು, “ಇದು ಕೇವಲ ಕಣ್ಣಿಗೆ ಮಣ್ಣೆರಚುವ ನಾಟಕ,” “ಪ್ರಚಾರಕ್ಕಾಗಿ ಮಾಡಿದ ನೆಪ ಮಾತ್ರದ ದಾಳಿ,” ಎಂದು ನೇರವಾಗಿ ಪ್ರಶ್ನಿಸುತ್ತಿದ್ದಾರೆ.
ಸಾರ್ವಜನಿಕರ ಸಂಶಯವೇನು?ಹಿಂದಿನ ಅನೇಕ ಭ್ರಷ್ಟಾಚಾರ ಪ್ರಕರಣಗಳಂತೆ, ಈ ದಾಳಿಯು ಕೇವಲ ಶೋಧ ಕಾರ್ಯಾಚರಣೆಯ ಹಂತಕ್ಕೆ ಸೀಮಿತವಾಗದೇ, ಗಂಭೀರ ಕಾನೂನು ಕ್ರಮದತ್ತ ಸಾಗುತ್ತದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿದೆ.
“ದಾಳಿಯಾದ ನಂತರ ಎಷ್ಟು ಜನ ದೊಡ್ಡ ಅಧಿಕಾರಿಗಳ ಮೇಲೆ ಕ್ರಮ ಆಗಿದೆ? ಈ ಕೇಸ್ ಕೂಡ ಹಳೆಯ ಕಥೆಯಾಗುತ್ತದೆಯೇ?” ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಲೋಕಾಯುಕ್ತ ಪೊಲೀಸರ ಪ್ರಾಮಾಣಿಕತೆಗೆ ಅಗ್ನಿಪರೀಕ್ಷೆ! – ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯು ನಿರ್ದಾಕ್ಷಿಣ್ಯವಾಗಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದೇ ಅಥವಾ ಪ್ರಭಾವಕ್ಕೆ ಒಳಗಾಗುವುದೇ ಎನ್ನುವುದು ಕೂಡ ಚರ್ಚಾ ವಿಷಯವಾಗಿದೆ.
ದಾಳಿಯಲ್ಲಿ ವಶಪಡಿಸಿ ಕೊಂಡ ಕೋಟಿ ಗಟ್ಟಲೆ ಆಸ್ತಿ, ದಾಖಲೆ ಮತ್ತು ಹಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಮುಂದಿನ ನಡೆಯು, ಭ್ರಷ್ಟಾಚಾರ ನಿಗ್ರಹದ ವಿಚಾರದಲ್ಲಿ ಸರ್ಕಾರದ ಬದ್ಧತೆ ಮತ್ತು ಲೋಕಾಯುಕ್ತ ಪೊಲೀಸರ ಪ್ರಾಮಾಣಿಕತೆಯನ್ನು ರಾಜ್ಯದ ಜನತೆಯ ಮುಂದೆ ಸಾಬೀತು ಪಡಿಸಲಿದೆ.
ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ಎನ್ನುವುದೇ ಕಾದು ನೋಡಬೇಕಾದ ವಿಚಾರವಾಗಿದೆ. ಈ ದಾಳಿ ಎಷ್ಟರಮಟ್ಟಿಗೆ ವ್ಯವಸ್ಥೆಗೆ ಸರಿಯಾದ ದಿಕ್ಕನ್ನು ತಂದುಕೊಡುತ್ತದೆ ಎನ್ನುವುದರ ಮೇಲೆ ಸಾರ್ವಜನಿಕರ ನಂಬಿಕೆ ನಿಂತಿದೆ.ಈ ದಾಳಿಯು ನಾಟಕದ ದಾಳಿಯಾಗಿದೆಯೇ ಎನ್ನುವುದು ಕೂಡ ಅನುಮಾನಕ್ಕೆ ಒಳಗಾದ ವಿಚಾರವಾಗಿದೆ.
ಈ ದಾಳಿ ಎಷ್ಟರಮಟ್ಟಿಗೆ ಸರಿಯಾದ ವ್ಯವಸ್ಥೆಗೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಲೋಕಾಯುಕ್ತ ಪೋಲಿಸರೇನು ಪ್ರಾಮಾಣಿಕರಾಗಿ ಕೆಲಸ ಮಾಡುತ್ತಾರೆ ಇಲ್ಲವೋ ಎನ್ನುವುದು ಕೂಡ ಇದೇ ಒಂದು ಪ್ರಕರಣದಲ್ಲಿ ಹೊರಬೀಳಲಿದೆ ಎಂದು ಕಾದು ನೋಡಬೇಕಾಗಿದೆ ಎಂದು ಸಾರ್ವಜನಿಕರು ಚರ್ಚೆಗೆ ತ್ರಾಸವಾದ ವಿಚಾರವಾಗಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ

