ಅಲೆಮಾರಿಗಳಿಗೆ ವಿಶೇಷ ಸೌಲಭ್ಯ ಸರ್ಕಾರ ಕೊಡಬೇಕು – ಪಲ್ಲವಿ.

ತರೀಕೆರೆ ಅ.13

ರಾಜ್ಯದಲ್ಲಿ ಅಲೆಮಾರಿಗಳು ಎಲ್ಲಾ ರಂಗಗಳಲ್ಲಿಯೂ ಸಹ ಅವಕಾಶ ವಂಚಿತರಾಗಿದ್ದಾರೆ ಇವರಲ್ಲಿ ಅನಕ್ಷರತೆ,ಬಡತನ ತುಂಬಿದೆ ಆದ್ದರಿಂದ ನಾನೇ ಸ್ವಯಂ ಪ್ರೇರಿತವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೆನೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ ಪಲ್ಲವಿ ರವರು ಹೇಳಿದರು. ಅವರು ಇಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ನಂದಿ ಹೊಸಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದವರನ್ನು ಭೇಟಿ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು ಸಮಸ್ಯೆಗಳಿಗೆ ಅಧಿಕಾರಿಗಳಿಂದ ಸ್ಥಳದಲ್ಲಿಯೇ ಪರಿಹಾರ ಮಾಡಲು ಸೂಚಿಸಿ ಮಾತನಾಡಿದರು. ಅಲೆಮಾರಿಗಳಲ್ಲಿ ರಾಜಕೀಯ ಪ್ರಾತಿನಿತ್ಯ ಇಲ್ಲವೇ ಇಲ್ಲ,ಜಿಲ್ಲಾ ಪಂಚಾಯಿತಿ ಸದಸ್ಯರು, ಎಂಎಲ್ಎ, ಎಂ ಪಿ ಗಳು ಇಲ್ಲವೇ ಇಲ್ಲ 59 ಅಲೆಮಾರಿ ಸಮುದಾಯಗಳು ಒಗ್ಗಟ್ಟಿಲ್ಲ ಇವರನ್ನು ಮುಂದೆ ಇಟ್ಟುಕೊಂಡು ಕೆಲವರು ಲಾಭ ಪಡೆದುಕೊಳ್ಳುತ್ತಿದ್ದಾರೆ ಇವರನ್ನು ಅವಕಾಶಗಳಿಂದ ವಂಚಿತರಾಗಿಸಿದ್ದಾರೆ. ಸಮುದಾಯಗಳನ್ನು ಹೊಡೆಯುತ್ತಿದ್ದಾರೆ ಇವರನ್ನು ದಿಕ್ಕು ತಪ್ಪಿಸಿ ಅನಾಥ ಪ್ರಜ್ಞೆ ಯಾಗಿಸಿದ್ದಾರೆ ಇವರಿಗೆ ಒಳ ಮೀಸಲಾತಿಯ ಜೊತೆಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಪಡಿಸಲು ವಿಶೇಷ ಸೌಲಭ್ಯಗಳನ್ನು ಸರ್ಕಾರ ಕೊಡಬೇಕು ಎಂದು ಹೇಳಿದರು. ಸಭೆಯಲ್ಲಿ ಅಲೆಮಾರಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಶರತ್ ಕುಮಾರ್ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಸ್ ಮಂಜುನಾಥ್ ಪುರಸಭಾ ಮುಖ್ಯ ಅಧಿಕಾರಿ ವಿಜಯಕುಮಾರ್ ಕಂದಾಯ ರಾಜಸ್ವ ನಿರೀಕ್ಷಕರಾದ ಎಸ್ ಕೆ ರಮೇಶ್, ನಾಗರಾಜ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಹಾಗೂ ಅಲೆಮಾರಿ ಸಮಾಜದ ಮುಖಂಡರಾದ ಗುಂಡಪ್ಪ ತಿಪ್ಪೇಶ ಕಡೂರಿನ ಶ್ರೀನಿವಾಸ್ ಮತ್ತು ಸುಣ್ಣದಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೇತನ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button