ಟಿ.ಎ.ಪಿ.ಸಿ.ಎಂ.ಎಸ್ ಗೆ ಅವಿರೋಧ ಆಯ್ಕೆ – ಶಾಸಕ ಸಿ.ಎಸ್ ನಾಡಗೌಡ ರಣತಂತ್ರ.
ಮುದ್ದೇಬಿಹಾಳ ಅ.15





ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತ ಇದರ ಆಡಳಿತ ಮಂಡಳಿಯ 12 ಜನ ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಚುನಾವಣಾ ಅಧಿಕಾರಿಯು ಆಗಿರುವ ವಿಜಯಪುರ ಸಹಕಾರ ಅಭಿವೃದ್ಧಿ ಅಧಿಕಾರಿ ರವೀಂದ್ರ ಆಳ್ಳೂರ್ ಫಲಿತಾಂಶ ಘೋಷಿಸಿದರು. ಬ ವರ್ಗದ ಮತ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದ ಗುರಲಿಂಗಪ್ಪ ಹಡಲಗೇರಿ (ಕೊಣ್ಣೂರ್) ಬಸವರಾಜ್ ಬಗಲಿ (ತಮದಡ್ಡಿ) ಮಹಿಳಾ ವರ್ಗದಿಂದ ವನಮಾಲಾ ಮೇಟಿ (ಹಂದ್ರಾಳ) ಮಲ್ಲಮ್ಮ ಶಿವನಗೌಡ ಪಾಟೀಲ್ (ಗುಂಡಕರ್ಜಗಿ) ಹಿಂದುಳಿದ ಅ ವರ್ಗದಿಂದ ಮುತ್ತಪ್ಪ ಮುತ್ತಣ್ಣವರ (ಮಸೂತಿ) ಹಿಂದುಳಿದ ಬ ವರ್ಗದಿಂದ ಮನೋಹರ್ ಮೇಟಿ (ಬಸರಕೋಡ) ಪರಿಶಿಷ್ಟ ಜಾತಿ ವರ್ಗದಿಂದ ಚಿದಾನಂದ ಸೀತಿಮನಿ (ಕೋಳೂರ) ಎಸ್.ಟಿ ವರ್ಗದಿಂದ ಗುರಣ್ಣ ಹತ್ತೂರ (ಕೊಣ್ಣೂರ) ಅ ವರ್ಗದ ಸಂಘಗಳ ಮತ ಕ್ಷೇತ್ರದಿಂದ ತಂಗಡಗಿ ಪಿ.ಕೆ.ಪಿ.ಎಸ್ ನ ಬಸವರಾಜ್ ಇಸ್ಲಾಂಪುರ್, ಹೂಲ್ಲೂರ ಪಿ.ಕೆ.ಪಿ.ಎಸ್ ನ ಸುರೇಶ್ ಹಳೇ ಮನಿ, ಗುಂಡಕನಾಳ ಪಿ ಕೆಪಿಎಸ್ ನ ಮಲ್ಲನಗೌಡ ಬಿರಾದಾರ, ಡವಳಗಿ ಪಿ.ಕೆ.ಪಿ.ಎಸ್ ನಿಂದ ನೀಲಕಂಠಗೌಡ ಗೌಡರ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ತಿಳಿಸಿದರು. ಅ ವರ್ಗದಿಂದ 16 ಜನ ನಾಮಪತ್ರ ಸಲ್ಲಿಸಿದವರ ಪೈಕಿ 12 ಜನ ನಾಮಪತ್ರ ವಾಪಸ್ ಪಡೆದು ಕೊಂಡರೆ, ಬ ವರ್ಗ ದಿಂದ 26 ಜನರಲ್ಲಿ 18 ಜನ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡರು ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದರು. ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಸಿ.ಎಸ್ ನಾಡಗೌಡ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಟಿ.ಎ.ಪಿ.ಸಿ.ಎಂ.ಎಸ್ ನಿಂದ. ಹಿರಿಯರು ಚುನಾವಣಾ ಕಣದಲ್ಲಿ ನನ್ನನ್ನು ಉಳಿಸಿ ಬೆಳೆಸಿದ್ದರಿಂದ ಜನ ಸೇವೆಗೆ ಮುಂದಾಗಿದ್ದೇನೆ. ಇದು ಕೃಷಿಕರ ಕ್ಷೇತ್ರವಾಗಿದ್ದು ಇಲ್ಲಿ ಆ ಪಕ್ಷ ಈ ಪಕ್ಷ ಎಂದು ರಾಜಕಾರಣ ಮಾಡುವುದಿಲ್ಲ, ಬಿಜೆಪಿಯ ಪ್ರಭುಗೌಡ ದೇಸಾಯಿ, ಆರ್.ಎಸ್ ಪಾಟೀಲ್, (ಕೂಚಬಾಳ) ಅವರ ಪಾತ್ರವೂ ಅವಿರೋಧ ಆಯ್ಕೆಯಲ್ಲಿ ಇದೆ. ಟಿ.ಎ.ಪಿ.ಸಿ.ಎಂ.ಎಸ್ ನಲ್ಲಿರುವುದು ಈಗ ಪಕ್ಕಾ ಕಾಂಗ್ರೆಸ್. ಕಾಂಗ್ರೆಸ್ ಎಂದರೆ ಎಲ್ಲಾ ಜಾತಿ ಜನಾಂಗ, ಪಕ್ಷದವರನ್ನು ಜೊತೆಗೂಡಿ ಕರೆದು ಕೊಂಡು ಹೋಗುವುದಾಗಿದೆ ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರಾನಾಳ, ಕಾಂಗ್ರೆಸ್ ಮುಖಂಡ ಸಿ.ಬಿ ಅಸ್ಕಿ, ಸುರೇಶ್ ಪಾಟೀಲ್ ಇಂಗಳಗೇರಿ, ಶ್ರೀಶೈಲ್ ಮುರಾಳ, ರಾಜು ಕೊಂಗಿ, ಸಂತೋಷ್ ಚೌಹಾನ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಬಿರಾದಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್ ಪಾಟೀಲ್, ಬಾಪು ಗೌಡ ಪಿರಾಪುರ, ನಾಡಗೌಡ್, ಸೇರಿದಂತೆ ಹಲವರು ಇದ್ದರು. ಸಹಾಯಕ ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಸಂತೋಷ್ ಇಲಕಲ್, ಟಿ.ಎ.ಪಿ.ಸಿ.ಎಂ.ಎಸ್ ಸಹಾಯಕ ವ್ಯವಸ್ಥಾಪಕ ಗುರು ರಾಜ್ ಕೋನ ರೆಡ್ಡಿ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ