ಜನಪ್ರಿಯ ಶಾಸಕ ಮತ್ತಿಮೂಡ ಜನ್ಮ ದಿನದಂದು ಅಂಗವಿಕಲರಿಗೆ ಬುದ್ದಿ ಮಾಂಧ್ಯರಿಗೆ – ಉಚಿತವಾಗಿ ಕ್ಷೌರ ಸೇವೆ.

ನಾಲವಾರ ಮಾ.03

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯ ಘಟಕದಲ್ಲಿ ಇರುವ ಜನಪ್ರಿಯ ಹೇರ್ ಸಲೂನ್ ಚಂದ್ರಿಕಾ ಬ್ಯೂಟಿ ಪಾರ್ಲರ್ ನಲ್ಲಿ ಹಡಪದ ಅಪ್ಪಣ್ಣ ಸಮಾಜದ ಸೇವಕ ಮತ್ತು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ ಎನ್ ಅವರು ಇಲ್ಲಿಯವರೆಗೆ 1850 ಕ್ಕೊ ಹೆಚ್ಚು ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದ್ದಾರೆ.

ಅವರು ಈಗಾಗಲೇ ಅನಾಥರಿಗೆ. ಅಂಧರಿಗೆ ಬುದ್ದಿ ಮಾಂಧ್ಯರಿಗೆ. ನಿರ್ಗತಿಕರಿಗೆ. ಪೌರ ಕಾರ್ಮಿಕರಿಗೆ. ಅನಾಥ ಆಶ್ರಮದ ಹಿರಿಯ ನಿರ್ಗತಿಕರಿಗೆ. ಸಾಧು ಸಂತರಿಗೆ. ಕಟ್ಟಡ ಕಾರ್ಮಿಕರಿಗೆ. ಅನಾಥ ಶಾಲಾ ಮಕ್ಕಳಿಗೆ ಹಿರಿಯ ವೃದ್ದರಿಗೆ. ಹೀಗೆ ಹಲವಾರು ಕ್ಷೇತ್ರದಲ್ಲಿ ವಿಭಿನ್ನವಾದ ಸೇವೆ ಸಲ್ಲಿಸಿದ್ದಾರೆ.

ನಮ್ಮ ಕಲಬುರಗಿ ಜಿಲ್ಲೆಯ ಗ್ರಾಮೀಣ ಮತ ಕ್ಷೇತ್ರದ ಜನಪ್ರಿಯ ಬಿಜೆಪಿ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ಮತ್ತಿಮೂಡ ಅವರ 46 ನೇ. ವರ್ಷದ ರಾಜಕೀಯ ಜೀವನದ ಸಂಭ್ರಮ ಹಾಗೂ ಅವರು ತಮ್ಮ 46 ನೇ. ವರ್ಷಕ್ಕೆ ಕಾಲಿಟ್ಟಿದ್ದಾರೆ.

ಇವರ ಹುಟ್ಟು ಹಬ್ಬವನ್ನು ಬಸವರಾಜ ಮತ್ತಿಮೂಡ ಅಣ್ಣಾ ಜಿ ಯವರ ಮಾರ್ಚ್ ೩ ರಂದು ಅಂಗವಿಕಲರಿಗೆ ಬುದ್ದಿ ಮಾಂಧ್ಯರಿಗೆ ಜನಪ್ರಿಯ ಹೇರ್ ಸಲೂನ್ ನಲ್ಲಿ ಉಚಿತವಾಗಿ ಕ್ಷೌರ ಸೇವೆಯ. ಸೇವಾ ಕಾರ್ಯಕ್ರಮಗಳ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

ಅಂದು ಬೆಳಿಗ್ಗೆ 9:30 ಕ್ಕೆ ಜನಪ್ರಿಯ ಹೇರ್ ಸಲೂನ್ ಚಂದ್ರಿಕಾ ಬ್ಯೂಟಿ ಪಾರ್ಲರ್ ನಲ್ಲಿ ರವಿವಾರ ಮತ್ತು ಸೋಮವಾರ ದಿನದಂದು ಎರಡು ದಿನಗಳಿಂದ 65 ಕ್ಕೂ ಹೆಚ್ಚು ಅಂಗವಿಕಲರಿಗೆ. ಬುದ್ದಿ ಮಾಂಧ್ಯರಿಗೆ ಸಾಧು ಸಂತರಿಗೆ ಪೌರ ಕಾರ್ಮಿಕರಿಗೆ. ಫ್ರೀಯಾಗಿ (ಉಚಿತವಾಗಿ) ಕ್ಷೌರ ಸೇವೆ ಈ ರೀತಿಯಾಗಿ ಸೇವೆ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button