ಸರಕಾರಕ್ಕೆ ಆದಾಯ ತರಬೇಕಾದ ಅಧಿಕಾರಿಗಳು – ಕಣ್ಣಿದ್ದು ಕುರುಡಾದರೋ…?
ನೀರಮಾನ್ವಿ ಅ.15





ಮಾನ್ವಿ ತಾಲೂಕಿನ ನೀರಮಾನ್ವಿ ಯಲ್ಲಮ್ಮ ದೇವಿ ಅಂದರೆ ಸಾಕು ನಂಬಿದ ಭಕ್ತರಿಗೆ ಆಶೀರ್ವಾದ ನೀಡುತ್ತಾಳೆ. ಆದರೆ ಜಾಗದ ಹೆಸರಿನಲ್ಲಿ ಹಗಲು ದರೋಡೆ ನಡೆದರು ಸಹ ತಹಸೀಲ್ದಾರ್ ಭೀಮರಾಯ ಕಣ್ಣಿದ್ದು ಕುರುಡ ರಾಗಿದ್ದಾರೆಂದು ನೀರಮಾನ್ವಿ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಜಾಗದ ಹರಾಜು ಮತ್ತು ಕಾಯಿ ಸಂಬಂಧ ದೀಪಾವಳಿ ಪಾಡ್ಯದಂದು ಹರಾಜು ಕರೆಯಲಾಗುತ್ತದೆ. ಆದರೆ ಮಾನ್ವಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಅವರು ಹರಾಜು ಮಾಡದೆ ಸಭೆಯಿಂದ ಹೊರ ನಡೆದಿದ್ದಾರೆಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ನೀರಮಾನ್ವಿ ಗ್ರಾಮದ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಸಹ ಭ್ರಷ್ಟಾಚಾರ ನಡೆದಿದ್ದು, ಪ್ರತಿ ವರ್ಷ ಮಾಡಬೇಕಾದ ಮಳಿಗೆ ಹರಾಜನ್ನು ಮೂರು ವರ್ಷ ಮಾಡಲು ಅವಕಾಶ ಇಲ್ಲ. ಆದರೆ ರಾಯಚೂರು ಜಿಲ್ಲಾಧಿಕಾರಿ ಆದೇಶಕ್ಕೆ ಮತ್ತು ಸೂಚನೆಗೆ ಬೆಲೆ ಇದೇನಾ ಇಲ್ಲವಾ ಎಂದು ನೀರಮಾನ್ವಿ ಗ್ರಾಮಸ್ಥರು ಗುಡುಗಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ