ನ್ಯಾಯಾಧೀಶರ ಮೇಲಿನ ದಾಳಿ, ಬಸಮ್ಮ ಸಹೋದರಿಯ ಅತ್ಯಾಚಾರ, ಹತ್ಯೆ ಖಂಡನೆ – ದಲಿತ ಸಮರ ಸೇನೆಯಿಂದ ಮನವಿ.
ವಿಜಯಪುರ ಅ.16





ಭಾರತ ಸಂವಿಧಾನದ ಪ್ರತಿ ರೂಪ ನ್ಯಾಯ ಪೀಠದ ಮುಖ್ಯ ನ್ಯಾಯಾಧೀಶರಾದ ಶ್ರೀ ಬಿ.ಆರ್ ಗವಾಯಿ ರವರ ಮೇಲಿನ ದಾಳಿ, ಸಹೋದರಿ ಬಸಮ್ಮ ಹತ್ಯೆ ಖಂಡಸಿ, ವಿಜಯಪುರ ಜಿಲ್ಲಾಧಿಕಾರಗಳ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದರು ಎಂ ಡಿ.ಎಸ್.ಎಸ್, ದಲಿತ ಸಮರ ಸೇನೆ ಜಿಲ್ಲಾಧ್ಯಕ್ಷ ಗೌಡಪ್ಪ ಬಡಿಗೇರ ಅವರು ತಿಳಿಸಿದರು, ನ್ಯಾಯಾಧೀಶರ ಮೇಲೆ ರಾಕೇಶ್ ಎನ್ನುವ ವಕೀಲರಿಂದಾದ ಅಮಾನವೀಯ ದಾಳಿ ಇಡೀ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಣಕು, ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆ, ಇಂತಹ ಪ್ರಕರಣಕ್ಕೆ ಕಾರಣರಾದವರ ಮೇಲೆ ಹಾಗೂ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಬಸಮ್ಮ ಮಾನಪ್ಪ ಚಲವಾದಿ ಸಹೋದರಿಯ ಅತ್ಯಾಚಾರ, ಹತ್ಯೆಗೆ ಸಂಬಂಧಿತರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸ ಬೇಕು.

ಮುಂದುವರೆದು ಸೌಜನ್ಯ, ಬಿಲ್ಕಿಸ್ ಬಾನು, ನಿರ್ಭಯ, ದಾನಮ್ಮ, ರೇಣುಕಾ, ಈಗ ಬಸಮ್ಮ, ಹೀಗೆ ಭವಿಷ್ಯದಲ್ಲಿ ಇನ್ನಷ್ಟು ಅಮಾಯಕ ಸಹೋದರಿಯರ ಸಾವು ನೋವು ಗಳಾಗಬಹುದು. ಇವರೆಲ್ಲರ ಹಾಗೂ ಹೀಗೆ ಅಮಾಯಕರ ಸಾವುಗಳಿಗೆ ಕೊನೆ ಇಲ್ಲವೇ ಎನ್ನುವಂತಾಗಿದೆ. ಇನ್ನೂ ಇತಿಹಾಸ ಮರೆತೆ ಹೋಗಿರುವ ಅದೆಷ್ಟೋ ಪ್ರಕರಣಗಳು, ಇಲ್ಲಿ ವಿವರಿಸಿದ ವಿಷಯ ಸೂಚಿಸಿ ಅನುಗುಣದಂತೆ ಮುಂದೆ ಭವಿಷ್ಯತ್ತಿನಲ್ಲಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕ್ರಮ ವಹಿಸ ಬೇಕೆಂದು ಈ ಮೂಲಕ ಒತ್ತಾಯಿಸಿದ್ದೇವೆ ಎಂದರು. ಸಂಚಾಲಕ ಪದಾಧಿಕಾರಿಗಳಾದ ಅಮೃತ್, ಪರಶು, ಶಂಕರ್, ಕಿರಣ್ ಹಾಗೂ ಮಹಿಳಾ ಸಮಾಜದ ಸದಸ್ಯರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ ದೇವರ ಹಿಪ್ಪರಗಿ