ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯವರ ಮೇಲೆ ಶ್ಯೂ ಎಸೆದ ವ್ಯಕ್ತಿಯನ್ನು ಗಡಿಪಾರು ಮಾಡಬೇಕು – ತರೀಕೆರೆ.ಎನ್ ವೆಂಕಟೇಶ್.
ತರೀಕೆರೆ ಅ.17





ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ರವರು ನೀಡಿದ ಸಂವಿಧಾನ ದಂತೆ ನಮ್ಮ ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸರ್ವ ಶ್ರೇಷ್ಠವಾದವು ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ರವರು ಇಂದು ಪಟ್ಟಣದ ತಾಲೂಕು ಆಡಳಿತ ಸೌದದಲ್ಲಿ ತಹಶೀಲ್ದಾರ್ ವಿಶ್ವಜಿತ್ ಮಹತ ರವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಿ.ಜೆ.ಐ ಬಿ.ಆರ್ ಗವಾಯಿ ರವರು ನ್ಯಾಯಾಲಯದಲ್ಲಿ ಕಲಾಪಗಳನ್ನು ನಡೆಸುತ್ತಿರುವಾಗ ರಾಕೇಶ್ ಕಿಶೋರ್ ಎಂಬ ವಕೀಲನು ಇವರ ಮೇಲೆ ಶ್ಯೂ ಎಸೆದಿರುವುದು ಕಾನೂನು ಬಾಹಿರ ಚಟುವಟಿಕೆ ಆಗಿರುತ್ತದೆ, ನ್ಯಾಯಾಲಯಕ್ಕೆ ಅಗೌರವ, ಅಪಮಾನ ಮಾಡಿರುವುದು ಈ ದೇಶದ ಪ್ರತಿಯೊಬ್ಬ ನಾಗರಿಕನು ತಲೆ ತಗ್ಗಿಸುವಂತಹ ಘಟನೆ ಯಾಗಿದೆ. ಆದ್ದರಿಂದ ಈತನ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಕೇಸು ದಾಖಲಿಸಿ ಮತ್ತು ಈತ ಈ ಕೃತ್ಯ ವ್ಯಸಗಿರುವ ದೇಶದ್ರೋಹಿ ಕೆಲಸವಾಗಿರುತ್ತದೆ ಆದ್ದರಿಂದ ದೇಶ ದ್ರೋಹಿ ಎಂದು ಪರಿಗಣಿಸಿ ಪ್ರಕರಣ ದಾಖಲಿಸ ಬೇಕು. ನ್ಯಾಯಾಂಗ ವ್ಯವಸ್ಥೆಗೆ ನ್ಯಾಯಾಧೀಶರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ವಿಕೃತ ಮನಸ್ಸಿನ ಕೋಮುವಾದಿ ವಕೀಲನನ್ನು ಗಡಿಪಾರು ಮಾಡಬೇಕು ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ನೇತೃತ್ವದ ಸಂಘಟನೆ ರಾಜ್ಯದಾದ್ಯಂತ ಪ್ರತಿಭಟನೆ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ಎನ್.ಹೆಚ್ ಬಸವರಾಜ್, ಜಿಲ್ಲಾ ಸಂಘಟನಾ ಸಂಚಾಲಕರಾದ ರಾಘವೇಂದ್ರ, ಪ್ರದೀಪ್ ಕುಮಾರ್, ತಾಲೂಕು ಸಂಘಟನಾ ಸಂಚಾಲಕರಾದ ಅಣ್ಣಪ್ಪ ತಾಲೂಕು ಖಜಾಂಚಿ ನಾಗರಾಜ್ ಹಾಗೂ ಜಿಲ್ಲಾ ಮುಖಂಡರಾದ ರಾಜೇಗೌಡರವರು ಉಪಸಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು