ಶ್ರೀಮಾತೆ ಶಾರದಾದೇವಿಯವರ ಸಮಗ್ರ ಜೀವನ ಅಧ್ಯಯನ ಬದುಕಿಗೆ ನವ ಸ್ಪೂರ್ತಿ – ಶ್ರೀಮತಿ ಸಿ.ಎಸ್ ಭಾರತಿ ಚಂದ್ರಶೇಖರ್ ಅನುಭವದ ನುಡಿ.
ಚಳ್ಳಕೆರೆ ಅ.18





ಶ್ರೀಮಾತೆ ಶಾರದಾದೇವಿಯವರ ಸಮಗ್ರ ಜೀವನ ಅಧ್ಯಯನದಿಂದ ನಿತ್ಯ ಬದುಕಿಗೆ ನವ ಸ್ಪೂರ್ತಿ ದೊರೆಯುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಮತ್ತು ಕ್ರಿಯಾಶೀಲ ಶಿಕ್ಷಕರಾದ ಶ್ರೀಮತಿ ಸಿ.ಎಸ್ ಭಾರತಿ ಚಂದ್ರಶೇಖರ್ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮಾತೆ ಶಾರದಾದೇವಿಯವರ ಸಮಗ್ರ ಜೀವನ” ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಶ್ರೀಮಾತೆಯವರ ಸಮಗ್ರ ಜೀವನ-ಸಂದೇಶಗಳನ್ನು ಒಳಗೊಂಡ ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ಬರೆದಿರುವ “ಶ್ರೀಶಾರದಾದೇವಿ ಜೀವನಗಂಗಾ” ಸದ್ಗ್ರಂಥವನ್ನು ಪ್ರತಿಯೊಬ್ಬರೂ ನಿತ್ಯ ಓದಬೇಕು.
ಈ ಸದ್ಗ್ರಂಥದ ಅನುಸಂಧಾನದಿಂದ ವ್ಯಕ್ತಿಯ ಜೀವನ ಪರಿವರ್ತನೆಯಾಗಿ ಸಾರ್ಥಕ ಬದುಕು ನಡೆಸಬಹುದು ಎಂಬುವುದಕ್ಕೆ ನನ್ನ ಬದುಕೇ ತಾಜಾ ಉದಾಹರಣೆ ಎಂದು ತಮ್ಮ ಕೃಪಾನುಭವಗಳನ್ನು ಭಕ್ತರೊಂದಿಗೆ ಹಂಚಿ ಕೊಂಡರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿಯನ್ನು ಶ್ರೀಮತಿ ಮಂಜುಳಾ ಉಮೇಶ್ ನೆರವೇರಿಸಿ ಕೊಟ್ಟರು.
ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಜಾಕೀರ್ ಹುಸೇನ್, ಹುಜೇರ್ ಅಹಮದ್, ಋತಿಕ್ ಕುಮಾರ್, ಯತೀಶ್ ಎಂ ಸಿದ್ದಾಪುರ, ವೆಂಕಟಲಕ್ಷ್ಮೀ, ವಾಸವಿ, ನಾಗರಾಜ್, ಶ್ರೀನಿವಾಸಲು, ಕವಿತಾ ಗುರುಮೂರ್ತಿ, ಚೇತನ್, ಡಾ, ಭೂಮಿಕ, ವಿನೋದ್ ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.