ಸಮಗ್ರ ತನಿಖೆ ಮಾಡುವಂತೆ ರೈತ ಸಂಘದ ಅಧ್ಯಕ್ಷ – ಹೊಳೆಯಪ್ಪ ಉಟಕನೂರು ಆಗ್ರಹ.
ಮಾನ್ವಿ ಅ.18





ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜನ ಕರ್ಮಕಾಂಡ ದಿನಕ್ಕೊಂದು ಬಯಲಾಗುತ್ತಿದ್ದು, ಸಿರವಾರ ತಾಲೂಕಿನ ಬೌದ್ಧ ಯಾತ್ರಾರ್ಥಿಗಳನ್ನು ನಾಗಪುರಕ್ಕೆ ಕಳಿಸದೆ ನಟರಾಜ ಹಣ ಲೂಟಿ ಮಾಡಿದ್ದಾನೆಂದು ರೈತ ಸಂಘದ ತಾಲೂಕಾಧ್ಯಕ್ಷ ಹೊಳೆಯಪ್ಪ ಉಟಕನೂರು ಗಂಭೀರ ಆರೋಪ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜನ ದುರಾಡಳಿತ ಹೆಚ್ಚಾಗಿದ್ದರು ಸಹ ಸರಕಾರ ಈತನ ಕರ್ಮಕಾಂಡ ಮೆಚ್ಚಿ ಉಳಿಸಿ ಕೊಂಡಿದೆಯೇ ಎಂಬುದು ತಿಳಿಯದಾಗಿದೆ. ಸಿರವಾರ ತಾಲೂಕಿನ ಬೌದ್ಧ ಯಾತ್ರಾರ್ಥಿಗಳ ಹೆಸರಲ್ಲಿ ಹಣ ಲೂಟಿಯಾಗಿದೆ ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಮಾಧ್ಯಮಕ್ಕೆ ಮೂಲಕ ಒತ್ತಾಯಿಸಿದ್ದಾರೆ.

ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜನ ಕರ್ಮಕಾಂಡ ದಿನಕ್ಕೊಂದು ಬಯಲಾದರು ಸಹ ಅವರನ್ನು ಮಾನ್ವಿ ಇಂದ ಯಾಕೆ ವರ್ಗಾವಣೆ ಮಾಡುತ್ತಿಲ್ಲ ಸರಕಾರ ಪ್ರಶ್ನೆ ಮಾಡಿದ್ದಲ್ಲದೆ ಮುಂದಿನ ದಿನಗಳಲ್ಲಿ ನಟರಾಜನ ವಿರುದ್ಧ ಪ್ರತಿಭಟನೆಯು ಅನಿವಾರ್ಯವಾಗುತ್ತದೆ ಎಂದು ಮಾಧ್ಯಮದಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ