ಸೂಗೂರೇಶ್ವರ, ರಾಘವೇಂದ್ರ ಟ್ರೇಡರ್ಸ್ – ಮಾಲೀಕರಿಂದ ರೈತರಿಗೆ ಮೋಸ.
ಚೀಕಲಪರ್ವಿ ಅ.18





ರೈತರು ಅಮಾಯಕರು, ನಕಲಿ ಬೀಜ ಮಾರಾಟ ಮಾಡಿದರಾಯಿತು ಎಂದು ಕೊಂಡು ಮಾನ್ವಿ ಪಟ್ಟಣದಲ್ಲಿರುವ ರಾಘವೇಂದ್ರ ಮತ್ತು ಸೂಗೂರೇಶ್ವರ ಟ್ರೇಡರ್ಸ್ ಮಾಲೀಕರು ನಕಲಿ ಭತ್ತದ ಬೀಜ ಕೊಟ್ಟಿದ್ದರಿಂದ ಚೀಕಲಪರ್ವಿ ಗ್ರಾಮದ ರೈತರು ನಮಗೆ ನ್ಯಾಯ ಬೇಕೆಂದು ಕೃಷಿ ಇಲಾಖೆಗೆ ಮನವಿ ಕೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಅಕ್ರಮ ದಂಧೆಗಳು ಹೆಚ್ಚು ನಡೆಯುತ್ತಿದ್ದರಿಂದ ಇಲ್ಲಿ ಸರಕಾರದ ಆಡಳಿತದ ಆದೇಶಗಳು ಪಾಲನೆ ಇಲ್ಲದ ಕಾರಣ ಅಮಾಯಕ ಚೀಕಲಪರ್ವಿ ಗ್ರಾಮದ ಬಡ ರೈತರಿಗೆ ನಕಲಿ ಭತ್ತದ ಬೀಜ ಪಡೆದು ಕೊಂಡು ಬೆಳೆಗಳು ಕೈಗೆ ಬಾರದೆ ಕೈ ಸುಟ್ಟುಕೊಂಡ ರೀತಿಯಾಗಿದೆ ರೈತರ ಪರಿಸ್ಥಿತಿ.
ರಾಘವೇಂದ್ರ ಮತ್ತು ಸೂಗೂರೇಶ್ವರ ಟ್ರೇಡರ್ಸ್ ಮಾಲೀಕರು ನಕಲಿ ಬೀಜ ಮಾರಾಟ ಮಾಡಲು ಅವಕಾಶ ಇದೆ ಅಂದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬೆಂಬಲ ದಿಂದಲೇ ಈ ದಂಧೆ ನಡೆಯುತ್ತಿದೆ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂದು ನೊಂದ ಬಡ ರೈತರಿಗೆ ನೋವುಂಟಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ