ಇನ್ನರ್ ವೀಲ್ ಕ್ಲಬ್ ನಿಂದ – ಏಂಜಲ್ ಕಿಟ್ ವಿತರಣೆ.
ತರೀಕೆರೆ ಅ.18





ಪ್ರತಿ ತಿಂಗಳಿಗೊಮ್ಮೆ ಇನರ್ ವೀಲ್ ಕ್ಲಬ್ ನಿಂದ ಸಮಾಜಕ್ಕೆ ಒಳಿತು ಮಾಡುವ ಯಾವುದಾದರೂ ಒಂದು ಕಾರ್ಯಕ್ರಮವನ್ನು ನಾವು ಮಾಡುತ್ತಿರುತ್ತೇವೆ ಎಂದು ಕ್ಲಬ್ ನ ಅಧ್ಯಕ್ಷರಾದ ನೀರಾ ವಾಸುದೇವ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮತ್ತು ನವಜಾತ ಶಿಶುಗಳಿಗೆ ಉಪಯುಕ್ತವಾದ ಅಗತ್ಯ ವಸ್ತುಗಳ ಏಂಜಲ್ ಕಿಟ್ ನ್ನು ವಿತರಿಸಿ ಮಾತನಾಡಿದರು.
ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ನಾವು ಬಾಣಂತಿ ಮಹಿಳೆಯರಿಗೆ ಹಾಗೂ ನವಜಾತ ಶಿಶುಗಳಿಗೆ ಸ್ವೆಟ್ಟರ್ ಹಾಗೂ ಇತರೆ ಅಗತ್ಯ ವಸ್ತುಗಳ ಒಳ ಗೊಂಡ ಏಂಜಲ್ ಕಿಟ್ ನ್ನು ವಿತರಿಸುತಿದ್ದೇವೆ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಧಿಕಾರಿಯಾದ ಎಂ ಜೆ ಚನ್ನಬಸಪ್ಪ ಮಾತನಾಡಿ ಸರ್ಕಾರದಿಂದ ಬಾಣಂತಿಯರಿಗೆ ಮಡಿಲು ಕಿಟ್ಟು ವಿತರಿ ಸಲಾಗುತ್ತಿತ್ತು ಆದರೆ ಈಗ ಕ್ಲಬ್ ನವರು ಏಂಜಲ್ ಕಿಟ್ಟು ವಿತರಿಸಿ ಬಾಣಂತಿಯರಿಗೆ ಮತ್ತು ನವಜಾತ ಶಿಶುಗಳಿಗೆ ಅಗತ್ಯವಾದ ವಸ್ತುಗಳನ್ನು ಈ ಕಿಟ್ಟಿನಲ್ಲಿರಿಸಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಇವರ ಈ ಸೇವೆಯನ್ನು ಹೇಳಿದರು.

ಕ್ಲಬ್ ನ ಕಾರ್ಯದರ್ಶಿಯಾದ ಶ್ವೇತ ದಿನೇಶ್, ಚೈತ್ರ ಚಂದ್ರು, ಮಂಜುಳಾ ಶರತ್, ಪುಷ್ಪ ಕಿಟ್ಟಿ, ಉಮಾ ದಯಾನಂದ್, ಸಂತೋಷ್ ನಾಯರ್, ಪ್ರತಿಭಾ ಶಂಕರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು