ರಾಕೇಶ ಕಿಶೋರ ಗೆ ಉಗ್ರ ಶಿಕ್ಷೆ ವಿಧಿಸಿ – ಆಲ್ ಇಂಡಿಯ ಬಿ.ಎಸ್.ಪಿ ಕರೆ.
ಬಾಗಲಕೋಟ ಅ.18





ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್ ಗವಾಯಿ ಅವರ ಮೇಲೆ ಶ್ಯೂ ಎಸೆಯಲು ಯತ್ನಿಸಿದ ಮನುವಾದ ಪೀಡಿತ ರೋಗಿಷ್ಟ ವಕೀಲ ರಾಕೇಶ ಕಿಶೋರ ನ ವರ್ತನೆಯನ್ನು ಆಲ್ ಇಂಡಿಯ ಬಹುಜನ ಸಮಾಜ ಪಾರ್ಟಿಯು ಉಗ್ರವಾಗಿ ಖಂಡಿಸುತ್ತದೆ. ಸಂವಿಧಾನವನ್ನು ಗೌರವಿಸುವ ಹಾಗೂ ಪ್ರಜಾಪ್ರಭುತ್ವವಾದಿ ಮೌಲ್ಯಗಳಿಗೆ ಮನ್ನಣೆ ನೀಡುವವರೆಲ್ಲರೂ ಸಹ ಈ ರೋಗಿಷ್ಟೀಗೆ ಗರಿಷ್ಠ ಮಟ್ಟದ ಶಿಕ್ಷೆಯನ್ನು ವಿಧಿಸಬೇಕೆಂದು ರಾಷ್ಟ್ರಪತಿಗಳನ್ನು ಆಲ್ ಇಂಡಿಯ ಬಿ.ಎಸ್.ಪಿಯ ರಾಜ್ಯ ಉಪಾಧ್ಯಕ್ಷ ವೈ.ಸಿ ಕಾಂಬಳೆ ಆಗ್ರಹಿಸಿದ್ದಾರೆ. ಇದರಿಂದ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದಕಾರಣ ಇಂತಹ ರೋಗಿಷ್ಟ ಮನಸ್ಥಿತಿಯ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸ ಬೇಕೆಂದು ರಾಜ್ಯ ಕಾರ್ಯಕಾರಣಿ ಸದಸ್ಯ ಗುರುಶಾಂತಪ್ಪ ಮದಿನಕರ, ಜಿಲ್ಲಾಧ್ಯಕ್ಷ ಭೀಮರಾವ ಕಾಳವ್ವಗೋಳ, ಮಂಜುನಾಥ ನಡುವಿನಮನಿ, ಶಂಕರ ಚಂದಾವರಿ ಮುಂತಾದವರು ಒತ್ತಾಯಿಸಿದ್ದಾರೆ.