ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟದ ಯುವ ಘಟಕಕ್ಕೆ – ಕ್ರಾಂತಿಕುಮಾರ ಯಾದವ ಆಯ್ಕೆ.
ಮಾನ್ವಿ ಅ.20





ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟದ ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಎಂ. ಪ್ರವಿಣಕುಮಾರ ರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಹಿಂದುಳಿದ ವರ್ಗದ ಯುವಕರು ಉಪಸ್ಥಿತರಿದ್ದರು.
ಹೊಸ ಘಟಕದ ಹುದ್ದೆಗಳು ಈ ಕೆಳಗಿನಂತಿವೆ:ಗೌರವಾಧ್ಯಕ್ಷ: ಕೆ. ಮಂಜುನಾಥ ಮಾಡಗಿರಿಅಧ್ಯಕ್ಷ: ಕ್ರಾಂತಿಕುಮಾರ್ ಯಾದವ್ಕಾರ್ಯಾಧ್ಯಕ್ಷ: ವರಪ್ರಸಾದ್ಉಪಾಧ್ಯಕ್ಷರು: ರೇಣುಕಾರಾಜ್, ಕೆ. ಸುರೇಶ್, ನವೀನ್, ಆನಂದಗೌಡ, ಮನೋಜ, ದೇವೇಗೌಡಪ್ರಧಾನ ಕಾರ್ಯದರ್ಶಿ: ಕೆ. ಸಂದೀಪಖಜಾಂಚಿ: ನಾಗರಾಜ ಕುಂಬಾರಕಾನೂನು ಸಲಹೆಗಾರ: ಚಂದ್ರಶೇಖರ (ವಕೀಲರು)ಕಾರ್ಯದರ್ಶಿಗಳು: ಶಿವಕುಮಾರ್ ಹೂಗಾರ, ಯಲ್ಲಲಿಂಗೇಶ್ವರ, ಗೋಪಿ ನಾಯ್ಡು, ಯಲ್ಲಪ್ಪ ಜೋಗಿ, ಅಮರೇಶ ಕುಂಬಾರ, ನಿಂಗರಾಜ ಮಡಿವಾಳಸಂಘಟನಾ ಕಾರ್ಯದರ್ಶಿಗಳು: ಬಸವರಾಜ ಹೇಳವರ, ಮನೋಹರ ವಿಶ್ವಕರ್ಮ, ವೆಂಕಟೇಶ ಯಾದವ, ಹುಸೇನಿ ಉಪ್ಪಾರ್, ಗೋಪಿ, ಸನತಕುಮಾರ.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಎಂ. ಪ್ರವಿಣಕುಮಾರ ರವರು, “ಯುವ ಘಟಕವು ನಮ್ಮ ಸಂಘದ ಬಲದ ಮೂಲಸ್ತಂಭವಾಗಬೇಕು. ಹಿಂದುಳಿದ ವರ್ಗದ ಹಕ್ಕುಗಳ ರಕ್ಷಣೆಗೆ ಹಾಗೂ ಸಮಾಜದ ಒಗ್ಗಟ್ಟಿಗೆ ಯುವಕರು ಮುಂಚೂಣಿಯಲ್ಲಿರಬೇಕು,” ಎಂದು ಹೇಳಿದರು.
ಅವರು ಮುಂದುವರೆದು, ಹೊಸ ತಂಡದಿಂದ ಸಂಘದ ಬಲವರ್ಧನೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಾಮಾಜಿಕ ಜಾಗೃತಿಗೆ ನವಚೈತನ್ಯ ತರಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ಘಟಕದ ಗೌರವಾಧ್ಯಕ್ಷ ನಾಗೇಶ ಕಬ್ಬೇರ್, ಉಪಾಧ್ಯಕ್ಷ ಸೂರ್ಯ ನಾರಾಯಣ ಯಾದವ, ಪ್ರಧಾನ ಕಾರ್ಯದರ್ಶಿ ನರಸಿಂಹ ಹೆಳವರ, ಖಜಾಂಚಿ ಭೀಮರಾಯ ಸರ್, ಸಂಘಟನಾ ಕಾರ್ಯದರ್ಶಿಗಳಾದ ವಿಜಯಕುಮಾರಗೌಡ ಮತ್ತು ಶಿವಕುಮಾರ್ ಚಲ್ಮಲ್, ಮೌಲಪ್ಪ ಚೀಕಲಪರ್ವಿ ಸೇರಿದಂತೆ ಹಿಂದುಳಿದ ಜಾತಿಗಳ ಸಮಾಜದ ಯುವಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ