“ನನ್ನದೇ ದೀಪಾವಳಿ”…..

ಇಂದು ನಾವು ಎಲ್ಲರೂ ಬೆಳಕುಗಳ ಹಬ್ಬವಾದ




ದೀಪಾವಳಿಯನ್ನು ಆಚರಿಸುತ್ತಿದ್ದೇವೆ.
ಆದರೆ ನನ್ನ ದೀಪಾವಳಿ ಸ್ವಲ್ಪ ವಿಭಿನ್ನ.
ನಿಶ್ಶಬ್ದ ರಾತ್ರಿ ನನ್ನ ಹೃದಯದೊಳಗೇ,
ಒಂದೊಂದು ಕನಸು ದೀಪದಂತು ಹೊತ್ತಿದೆ.
ಹೊರ ಜಗತ್ತು ಪಟಾಕಿ ಸದ್ದಲಿ ಮುಳುಗಿದರೂ,
ನನ್ನ ಮನದ ಬೆಳಕು ಶಾಂತವಾಗಿಯೇ
ಹೊಳೆಯುತ್ತಿದೆ.
ಬೀದಿಯ ದೀಪಗಳು ಕ್ಷಣಕಾಲದ ಕಿರಣ,
ಆದರೆ ನನ್ನ ಆತ್ಮದ ಬೆಳಕು ಎಂದಿಗೂ
ನಾಶವಾಗದ ವರುಣ
ಹಂಚದ ಈ ದೀಪ ನನ್ನದೇ ಧನ ಮನ
ಇದು ನನ್ನ ಹೃದಯದ ನಿಜವಾದ ಹಬ್ಬ.
ಸಂತೋಷಕ್ಕೆ ಸದ್ದು ಬೇಡ,
ಪ್ರತಿ ನಗು ಒಂದೊಂದು ಬೆಳಕು ಸಾಕು.
ನನ್ನೊಳಗಿನ ಶಾಂತಿ, ನನ್ನ ಜಯದ ಚಿಹ್ನೆ
ಇದು “ನನ್ನದೇ ದೀಪಾವಳಿ”
ಕವಯಿತ್ರಿ:ದೀಪಿಕಾ.ಚಂ ಹಲಗಿ…✍️