ಬಂಜಾರರು ಆಚರಿಸುವ ವಿಶಿಷ್ಟ – ದೀಪಾವಳಿ ಹಬ್ಬ.
ಚಿನ್ನ ಸಮುದ್ರ ಅ.22




ಮನುಷ್ಯನ ಅಜ್ಞಾನ, ಅಂಧಕಾರವೇ ಹೋಗಲಾಡಿಸಲು ಶಿಕ್ಷಣ ವೆಂಬ ದೀಪದಂತೆ ಪ್ರಜ್ವಲಿಸಿ ಬೇಕಾಗುತ್ತದೆ. ಬಂಜಾರರು ಬುದ್ದಿ ಜೀವಿಗಳು ಎಂಬುದನ್ನು ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಸಾಬೀತು ಪಡಿಸಿದ್ದಾರೆ.ಶತೃವಿನ ಮೇಲೆ ವಿಜಯದ ಸಂಕೇತವಾಗಿ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆಂದು ಕೆಲವರು ಹೇಳುತ್ತಾರೆ. ದೀಪಾವಳಿಯನ್ನು ಬಂಜಾರ ಭಾಷೆಯಲ್ಲಿ “ದವಾಳಿ’ಎಂದು ಕರೆಯಲಾಗುತ್ತದೆ.

ಈ ದವಾಳಿಯನ್ನು ಬಂಜಾರರು ಎರಡು ದಿವಸ ಆಚರಿಸುತ್ತಾರೆ. ಬಂಜಾರರು ಮೊದಲ ದಿನ ಸಾಯಂಕಾಲ ಕಾಳಿಮಾಸ್ ಆಚರಣೆ ಮಾಡಿ ಅಂದು ತಾಂಡಾದ ಯುವತಿಯರು ಸೇರಿ ತಾಂಡಾದ ಜನರ ಒಳಿತಿಗಾಗಿ “ಮೇರಾ” ಎಂಬ ವಿಶೇಷವಾಗಿ ದೀಪ ಬೆಳಗಿಸಿ ಹರಿಸುತ್ತಾರೆ. ತಾಯಂದಿರು ತಮ್ಮ ಹದಿಹರೆಯದ ಹೆಣ್ಣುಮಕ್ಕಳನ್ನು “ಮೇರಾ” ಕಾರ್ಯಕ್ರಮಕ್ಕೆ ಅಣಿ ಗೊಳಿಸುತ್ತಾರೆ, ಬಂಜಾರ ಭಾಷೆಯ ಶಬ್ದ “ಮೇರಾ” ಅರ್ಥ ಹಾರೈಕೆ/ಶುಭಾಶಯಕ್ಕೆ ಸಮನಾಗುತ್ತದೆ. ರಾತ್ರಿ 10 ಗಂಟೆಯ ನಂತರ ತಾಂಡಾದ ಪ್ರಥಮ ನಾಗರಿಕ ಮಹಿಳೆ ನಾಯ್ಕಣ್ ಮನೆಯಿಂದ ಪ್ರಾರಂಭವಾಗುವ ಮೇರಾ ಕಾರ್ಯಕ್ರಮ ವರ್ಷ ದಾಡೆರ್ ಕೋರ್ ದವಾಳಿ ತೋನ ಮೇರಾ” (ನಮ್ಮ ಹಾರೈಕೆ ಮುಂದಿನ ದೀಪಾವಳಿ ತನಕ ನಿಮ್ಮನ್ನೆಲ್ಲಾ ಕಾಯಲಿ/ ಕಾಪಾಡಲಿ) ಎಂಬ ಹಾರೈಕೆಯು ಕುಲಗುರು ಸಂತ ಸೇವಾಲಾಲ್ ಮತ್ತು ಕುಲಮಾತೆ ಮರಿಯಮ್ಮಗೆ ಭಕ್ತಿಯಿಂದ ಮೊದಲನೆ “ಮೇರಾ” ಅರ್ಪಿಸಿದ ಮೇಲೆ ಇಡೀ ರಾತ್ರಿ ನಡೆಯುವ ಈ ಶುಭಾಶಯ ಹೇಳುವ ಸಂಪ್ರದಾಯದಲ್ಲಿ ಬಳಸುವ ಶಬ್ಧಗಳು ಸಂಖ್ಯೆ ಹಾಗೂ ಅರ್ಥದಲ್ಲಿ ಹಿಗ್ಗುತಾ ಹೋಗುತ್ತವೆ ಕುಟುಂಬದ ಪ್ರತಿ ಸದಸ್ಯರ ಹೆಸರು ಹೇಳಿ ಅವರಿಗೆ ಶುಭ ಹಾರೈಸುತ್ತಾರೆ.

ಎರಡನೇ ದಿನ ಮುಂಜಾನೆಯಲ್ಲಿ ದೈವಾದಿನರಾದ ಹಿರಿಯರಿಗೆ ಪೂಜಿಸಿ ಧಬಕಾರ ಕೋಡುವ ಪದ್ದತಿ ಬಂಜಾರರಲ್ಲಿ ಇದೆ. ಅದಾದನಂತರ ತಾಂಡಾದ ಎಲ್ಲಾ ಯುವತಿಯರು ಹೊಲ ಗದ್ದೆಗಳಿಂದ ವಿಧವಿಧ ಹೂಗಳನ್ನು ತಂದು ಸಾಯಂಕಾಲ ತಾಂಡಾದ ಎಲ್ಲಾ ಮನೆಗಳಿಗೆ ಹೋಗಿ ಪೂಜೆ ಮಾಡಿ ಸಗಣಿಯಿಂದ ಗೊಂಧಳಿ ಮಾಡಿ ಶುಭ ಹಾರೈಸುತ್ತಾರೆ. ಬಂಜಾರರು ವಿಶೇಷವಾಗಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತಾರೆ. ಹಲವಾರು ಬಂಜಾರ ಸಾಹಿತಿಗಳು ಹಾಗೂ ಭಜನಾಕಾರರು ಬಂಜಾರರು ಆಚರಿಸುವ ದೀಪಾವಳಿ ಹಬ್ಬದ ವಿಶೇಷತೆಯ ಕುರಿತು ಹಾಡುಗಳನ್ನು ರಚಿಸಿದ್ದಾರೆ.

ಬಂಜಾರ ಜಾನಪದ ಕಲಾವಿದನಾದ ನಾನು ಬಂಜಾರರು ಆಚರಿಸುವ ದೀಪಾವಳಿ ಹಬ್ಬದ ಮೇಲೆ ಹಾಡುಗಳನ್ನು ಕಟ್ಟಿ ಹಾಡಿದ್ದೇನೆ. ಹಾಗಾಗಿ ಹಲವಾರು ಸಂಘ ಸಂಸ್ಥೆಗಳು ನನಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಅಂಧಕಾರವನ್ನು ಕಳೆದು ದೀಪಾವಳಿ ಎಲ್ಲಾರು ಜೀವನದಲ್ಲಿ ಬೆಳಕು ತರಲಿ ಎಂದು ಆಶಿಸುತ್ತೇನೆ.
ಸಿ.ಎಚ್ ಉಮೇಶ ನಾಯ್ಕ ಚಿನ್ನ ಸಮುದ್ರ,
ಕ್ರಾಂತಿಕಾರಿ ಗೀತೆ ಹಾಗೂ ಜಾನಪದ ಗಾಯಕರು.