ಹಡಪದ ಅಭಿವೃದ್ದಿ ನಿಗಮ ಮಂಡಳಿ ಘೋಷಣೆ ಸಮಾಜದ ವತಿಯಿಂದ – ರಾಜ್ಯ ಸರ್ಕಾರಕ್ಕೆ ಅಭಿನಂದನೆ.

ಕಲಬುರಗಿ ಅ.23

ಹಡಪದ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಡಪದ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿದಕ್ಕೆ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕರಾದ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರ ವತಿಯಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಲಾಗುವುದು.ಈ ಹಿಂದೆ ಬಿ.ಜೆ.ಪಿ ಸರ್ಕಾರ ಇದ್ದಾಗ ಬಸವರಾಜ ಬೊಮ್ಮಾಯಿ ರವರು ಮುಖ್ಯಮಂತ್ರಿಗಳಾಗಿದ್ದು, ಹಡಪದ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಡಪದ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ ಆದೇಶ ನೀಡಿದರು. ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೋಳ್ಳಲಾರದೆ ನೆನೆಗುದಿಗೆ ಬಿದ್ದಿದ್ದು, ಈಗಿನ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹಿಂದುಳಿದ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಹಡಪದ ಸಮಾಜಕ್ಕೆ ದೀಪಾವಳಿಯ ಸಿಹಿ ಸುದ್ದಿ ನೀಡಿದ್ದು ಈ ಒಂದು ನಿಗಮವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸಿ ಆದೇಶ ಹೊರಡಿಸಿದ್ದು, ಇದಕ್ಕೆ ಪ್ರತೇಕ್ಷವಾಗಿ ಪರೋಕ್ಷವಾಗಿ ಒತ್ತಡ ನೀಡಿದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸಚಿವರಿಗೂ. ಶಾಸಕರಿಗೂ ರಾಜ್ಯ ಹಡಪದ ಸಮಾಜದ ವತಿಯಿಂದ ಹಾಗೂ ಜಿಲ್ಲಾ ಹಡಪದ ಸಮಾಜ ಕಲಬುರಗಿ ವತಿಯಿಂದ ಹೃತ್ಪೂರ್ವಕ ಅನಂತ ಕೃತಜ್ಞತೆಗಳು ಸಲ್ಲಿಸಲಾಗುವುದು, ಹಾಗೂ ಈ ಒಂದು ನಿಗಮಕ್ಕೆ ಮುಂಬರುವ ದಿನಗಳಲ್ಲಿ 100 ಕೋಟಿ ರೂ ಅನುದಾನ ನೀಡಿ ಹಡಪದ ಸಮಾಜದ ಜನಾಂಗವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ, ರಾಜಕೀಯವಾಗಿ, ಅಭೀವೃದ್ಧಿ ಹೊಂದಲು ಸಮಾಜ ಕಂಕಣ ಬದ್ದರಾಗಬೇಕು, ಈ ಸಮಾಜವು ಸುಧೀರ್ಘವಾಗಿ 25 ವರ್ಷಗಳಿಂದ ರಾಜ್ಯದಾದ್ಯಂತ ಅನೇಕ ಜಿಲ್ಲೆಯಲ್ಲಿ ಮತ್ತು ತಾಲೂಕಿನಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಹೋರಾಟ ಮಾಡಿದ್ದು. ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹತ್ತು ಹಲವು ವಿಭಿನ್ನ ರೀತಿಯ ಹೋರಾಟ ನಮ್ಮ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಮತ್ತು ರಾಜ್ಯ ನಾಯಕರ ಶ್ರೀಗಳ ಸಮ್ಮುಖದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡಿದ್ದು.

ತಮಟೆ ಚಳುವಳಿ ಅರೆ ಬೆತ್ತಲೆ ಪ್ರತಿಭಟನೆ. ಧೀರ್ಘದಂಡ ನಮಸ್ಕಾರಗಳು, ಕ್ಷೌರ ಅಣಕು ಪ್ರದರ್ಶನ ಹೋರಾಟ, ಉರುಳು ಸೇವೆ ಹೋರಾಟ, ಉಪವಾಸ ಸತ್ಯಾಗ್ರಹ ಹಾಗೂ ಹಡಪದ ಅಪ್ಪಣ್ಣ ಸಮಾಜದ ನಿಗಮಕ್ಕಾಗಿ ಹಲವಾರು ಪ್ರತಿಭಟನೆ ನಡೆಸಿ ಯಾವುದೇ ಸರ್ಕಾರ ಇರಲಿ ಆ ಸರ್ಕಾರಕ್ಕೆ ಎಚ್ಚರಿಸುವ ಮೂಲಕ ಸಮಾಜದ ಸಂಘಟನೆಯ ಉದ್ದೇಶಗಳನ್ನು ಹೊಂದಿ ನಮ್ಮ ಬಹು ದಿನಗಳ ಬೇಡಿಕೆ ಈಡೇರಿದೆ, ಈ ಗೆಲವು (ಈ ಪ್ರತಿಫಲ) ಇಡೀ ಕರ್ನಾಟಕ ರಾಜ್ಯದ ಸಮಸ್ತ ಪ್ರತಿಯೊಂದುಹಳ್ಳಿ ಹಳ್ಳಿಯ ಸಮಾಜದ ಗೆಲುವು ಎಂದು ಹೆಮ್ಮೆಯಿಂದ ಹೇಳಿದರು. ಬಸವಣ್ಣನವರ ಕಾಯಕ ತತ್ವ ನಂಬಿ ಬದುಕು ನಡೆಸುತ್ತಿರುವ ಹಡಪದ ಸಮಾಜದ ವತಿಯಿಂದ ಮತ್ತು ಸಮಸ್ತ ಕರ್ನಾಟಕ ರಾಜ್ಯದ ಹಡಪದ ಅಪ್ಪಣ್ಣ ಸಮಾಜದ ಬಾಂಧವರ ಪರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯ ನವರನ್ನು ಮತ್ತು ವಾರ್ತಾ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಚಿವರು ಶಿವರಾಜ್ ತಂಗಡಗಿ ಅವರಿಗೆ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.ರಾಜ್ಯದಲ್ಲಿ ಹಡಪದ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದೆ. ಸರ್ಕಾರ ಇದೀಗ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿರುವುದು ಅತ್ಯಂತ ಖುಷಿಯ ವಿಚಾರ.ನಿಗಮದ ಪ್ರಯೋಜನವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜ ಅಭಿವೃದ್ಧಿ ಹೊಂದಬೇಕಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕರು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ರವರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button