ಶ್ರೀಶಾರದಾಶ್ರಮದಲ್ಲಿ “ಏಸು ಭಕ್ತರಿಗೆ ಏಸು ದರ್ಶನ” – ಅಧ್ಯಾಯದ ಪಾರಾಯಣ.
ಚಳ್ಳಕೆರೆ ಅ.24




ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುಗಾವತಾರ ಶ್ರೀರಾಮಕೃಷ್ಣ ಭಾಗ-2ರ ಗ್ರಂಥದಲ್ಲಿ ಬರುವ “ಏಸು ಭಕ್ತರಿಗೆ ಏಸು ದರ್ಶನ” ಎಂಬ ಅಧ್ಯಾಯದ ಪಾರಾಯಣ ಕಾರ್ಯಕ್ರಮವನ್ನು ಆಶ್ರಮದ ಸ್ವಯಂ ಸೇವಕ ಚೇತನ್ ಕುಮಾರ್ ನಡೆಸಿ ಕೊಟ್ಟರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿಯನ್ನು ಶ್ರೀಮತಿ ಮಂಜುಳಾ ಉಮೇಶ್ ಮಾಡಿದರು.

ಪಾರಾಯಣ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಸಂತೋಷ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

