ಕನ್ನಡದ ನಾಮಫಲಕ ಕಡ್ಡಾಯ – ಹಸನ್ ನಧಾಪ್ ಕರೆ ನೀಡಿದರು.
ದೇವರ ಹಿಪ್ಪರಗಿ ಅ.29


ಪಟ್ಟಣದ ಅಂಗಡಿ, ಮುಂಗಟ್ಟು, ಮಳಿಗೆ, ಆಸ್ಪತ್ರೆ, ಕಚೇರಿ ಮೊದಲಾದವುಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮ ಫಲಕವನ್ನು ಅಳವಡಿಸ ಬೇಕು, ಇಲ್ಲದಿದ್ದರೆ ಅನ್ಯಭಾಷಾ ಫಲಕಗಳಿಗೆ ಕಪ್ಪು ಮಸಿಯನ್ನು ಬಳಿಯ ಬೇಕಾಗುತ್ತದೆ ಎಂದು ತಾಲ್ಲೂಕಿನ ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಹಸನ್ ನದಾಫ್ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು. ನಾಮ ಫಲಕದಲ್ಲಿ ಶೇಕಡಾ 60% ರಷ್ಟು ಕನ್ನಡವನ್ನು ಬಳಸ ಬೇಕೆಂಬ ಸರ್ಕಾರದ ನಿಯಮ ವಿದ್ದರೂ ಕೂಡ ದೇವರ ಹಿಪ್ಪರಗಿ ಪಟ್ಟಣದಲ್ಲಿ ಪಾಲನೆ ಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬರುವ ನವೆಂಬರ್ 1 ರಂದು ರಾಜ್ಯೋತ್ಸವದ ಒಳಗೆ ನಾಮ ಫಲಕಗಳಲ್ಲಿ ಕನ್ನಡವನ್ನು ಬಳಸದಿದ್ದರೆ ಕಪ್ಪು ಮಸಿಯನ್ನು ಬಳೆಯುವ ಮೂಲಕ ನಮ್ಮ ಕರ್ನಾಟಕ ಸೇನೆಯ ಮೂಲಕ ತೀವ್ರ ಹೋರಾಟವನ್ನು ಮಾಡ ಬೇಕಾಗುತ್ತದೆ ಕೂಡಲೇ ಮಾನ್ಯ ತಾಲೂಕ ದಂಡಾಧಿಕಾರಿಗಳು ಪಟ್ಟಣದ ಅಂಗಡಿಗಳಿಗೆ ಹಾಕಿರುವ ಅನ್ಯ ಭಾಷಾ ನಾಮ ಫಲಗಳನ್ನು ತೆರವು ಗೊಳಿಸಬೇಕು ಎಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಸುನಿಲ್ ಕನಮಡಿ, ಹುಸೇನ್ ಕೊಕಟನೂರ, ದಾವಲ್ ಸಾಬ್ ಹೆಬ್ಬಾಳ, ಶಿವು ರೊಳ್ಳಿ, ಅಬ್ಬಾ ಸಲಿ ಆವೇರಿ, ಬೀರು ಹಳ್ಳಿ, ಪರಸು ನಾಯ್ಕೋಡಿ, ಹಮೀದ್ ಮುಲ್ಲಾ, ಅಬೂಬಕರ್, ಯಲಗಾರ , ನಬಿಲಾಲ ಚಿಕ್ ಸಿಂದಗಿ, ಶಿವನಗೌಡ ಮುಳಸಾವಳಗಿ, ಉಪಸಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

