ಬಂಜಾರ ಅಕಾಡೆಮಿಯ ಕ್ರೀಯಾಶೀಲ ಅಧ್ಯಕ್ಷರಾದ ಡಾ, ಎ.ಆರ್ ಗೋವಿಂದಸ್ವಾಮಿ ಯವರಿಗೆ – ರುದ್ರಪ್ಪ ಲಮಾಣಿ ಪಟಾಲಮ್ ರಿಂದ ಅಡ್ಡಿ ಪಡಿಸುವಿಕೆ ಎಷ್ಟು ಸಮಂಜಸ ಸಾರ್ವಜನಿಕರ ಪ್ರಶ್ನೆಯಾಗಿದೆ…?
ಬೆಂಗಳೂರು ಅ.29


ಕರ್ನಾಟಕ ರಾಜ್ಯ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಕ್ರಿಯಾಶೀಲ ಮತ್ತು ಪ್ರಾಮಾಣಿಕ ಅಧ್ಯಕ್ಷರಾದ ಡಾ, ಎ.ಆರ್ ಗೋವಿಂದಸ್ವಾಮಿ ಅವರ ಕರ್ತವ್ಯಗಳಿಗೆ ಅಡ್ಡಿಪಡಿಸಿ ಕರ್ನಾಟಕ ವಿಧಾನ ಸಭೆಯ ಉಪ ಸಭಾಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿಯವರು ತೇಜೋವಧೆಗೆ ಪಿತೂರಿ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ರುದ್ರಪ್ಪ ಲಮಾಣಿಯವರು 07-02-2025 ರಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು (ಪತ್ರ ಸಂಖ್ಯೆ: ಕವಿಸ.ಉಸ. 1089/2025) ಹಿರಿಯ ಸಾಹಿತಿ ಶ್ರೀಮತಿ ಬಿ.ಟಿ ಲಲಿತಾನಾಯಕ್ ಅವರಿಗೆ ಸೇವಾಲಾಲ್ ಪ್ರಶಸ್ತಿ ಘೋಷಣೆ ಮಾಡಿರುವ ಕ್ರಮವನ್ನು ಖಂಡಿಸಿರುತ್ತಾ, ಮಾನ್ಯ ರುದ್ರಪ್ಪ ಲಮಾಣಿಯವರ ಹತ್ತಿರದ ಸಂಬಂಧಿಯೊಬ್ಬರಿಗೆ ಪ್ರಶಸ್ತಿ ನೀಡಬೇಕೆಂದು ಅಸಾಂವಿಧಾನಿಕವಾಗಿ ಒತ್ತಾಯಿಸಿರುತ್ತಾರೆ. ಅಕಾಡೆಮಿಯ ಅಧ್ಯಕ್ಷರು ಮತ್ತು ಸ್ಥಾಯಿ ಸಮಿತಿಯ ಸದಸ್ಯರು ಲಲಿತಾನಾಯಕ್ ಅವರನ್ನು ಆಯ್ಕೆ ಮಾಡಿ ಪತ್ರಿಕಾ ಪ್ರಕಟಣೆ ನೀಡಿದ ಬಳಿಕವೂ ಒತ್ತಾಯ ತಂದಿರುವುದು ಅಸಾಂವಿಧಾನಿಕ ನಡೆ ಯಾಗಿರುತ್ತದೆ. ಅಕಾಡೆಮಿ ರಿಜಿಸ್ಟ್ರಾರ್ ದಿನಾಂಕ 17.03.2025 ರಂದು ಮಾನ್ಯ ಉಪ ಸಭಾಪತಿಗಳಿಗೆ ಪತ್ರ ಬರೆದು, ಈಗಾಗಲೇ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕೂಡ ಆಯೋಜಿಸಲಾಗಿದೆ ಎಂದು ಮನವರಿಕೆ ಮಾಡಿ ಕೊಟ್ಟಿದ್ದಾರೆ. ಹೀಗಿದ್ದರೂ ಶ್ರೀ ರುದ್ರಪ್ಪ ಲಮಾಣಿಯವರು, ಎ.ಆರ್ ಗೋವಿಂದಸ್ವಾಮಿ ಯವರಿಗೆ ದೂರವಾಣಿ ಕರೆ ಮಾಡಿ ವೈಯಕ್ತಿಕವಾಗಿ ನಿಂದಿಸಿರುತ್ತಾರೆ. “ನಾನೇ ಸರ್ಕಾರ ನಾನು ಹೇಳಿದಂತೆ ಕೆಳಬೇಕು ನನಗೆ ತಿಳಿಸದೆ ನನ್ನಲ್ಲಿ ಬಂದು ಚರ್ಚಿಸದೆ ಪ್ರಶಸ್ತಿ ಹೇಗೆ ನೀಡಿದಿರಿ?” ಎಂದು ಬೆದರಿಕೆ ಒಡ್ಡಿದ್ದಾರೆ. ರುದ್ರಪ್ಪ ಲಮಾಣಿಯವರ ಕಡೆಯ ಕೆಲವು ಪುಂಡರು ಗೋವಿಂದಸ್ವಾಮಿಯವರ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಗೋವಿಂದ ಸ್ವಾಮಿಯವರು ತನಗೆ ಪೊಲೀಸ್ ರಕ್ಷಣೆ ಒದಗಿಸ ಬೇಕೆಂದು ಕೋರಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ರುದ್ರಪ್ಪ ಲಮಾಣಿಯವರ ಬೆಂಬಲಿಗ ಸದಸ್ಯರಾದ ಮೋತಿಲಾಲ್ ಚವ್ಹಾಣ್ ಹಾಗೂ ಇನ್ನೊಬ್ಬ ವ್ಯಕ್ತಿ ಅಕಾಡೆಮಿಯ ಕೆಲಸ ಕಾರ್ಯಗಳಿಗೆ ಅಸಹಕಾರ ತೋರಿಸುತ್ತಿದ್ದಾರೆ. ಲೆಕ್ಕಾಧಿಕಾರಿ ಶ್ರೀ ಸುರೇಶ್ ನಾಯಕ್ ಮತ್ತು ಪ್ರಭಾರ ರಿಜಿಸ್ಟ್ರಾರ್ ಆದ ಡಿ.ಎಂ ರವಿಕುಮಾರ್ ಅವರು ಕೂಡಾ ಅಕಾಡೆಮಿಯ ಕೆಲಸ ಕಾರ್ಯಗಳಲ್ಲಿ ಯಾವುದೇ ಸಹಕಾರ ನೀಡುತ್ತಿರಲಿಲ್ಲ. ರುದ್ರಪ್ಪ ಲಮಾಣಿಯವರು ಸದಸ್ಯರಿಗೆ ಅಮಿಷ ಒಡ್ಡಿ ತಮ್ಮತ್ತ ಸೆಳೆದು ಕೊಂಡಿದ್ದಾರೆ. ಹಾಗಾಗಿ ಅಕಾಡೆಮಿಯ ಕೆಲಸ ಕಾರ್ಯಗಳನ್ನು ಸರಿಯಾಗಿ ನಡೆಸಲಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಕಾರ್ಯಕ್ರಮ ನಡೆಸದೆ, ಅಕಾಡೆಮಿ ಹಣ ಪೋಲು ಮಾಡಿದ್ದಾರೆ. ಲಮಾಣಿಯವರಿಂದ ಪ್ರಚೋದಿತರಾದ ಕೆಲವು ಸದಸ್ಯರು ಪ್ರಶಸ್ತಿಯನ್ನು ತಮ್ಮ ಸ್ವಂತ ಸಂಬಂಧಿಗಳಿಗೆ ಸುಳ್ಳು ಹೇಳಿ ಕೊಡಿಸಿ ಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ. ಇದನ್ನು ಖಂಡಿಸಿದ ಗೋವಿಂದ ಸ್ವಾಮಿಯವರ ವಿರುದ್ಧ ಶ್ರೀ ರುದ್ರಪ್ಪ ಲಮಾಣಿ ಜೊತೆ ಸೇರಿದ ಕೆಲವು ಸದಸ್ಯರು ದಿನಾಂಕ:17.06.2025 ರಂದು ಸುಳ್ಳು ಆರೋಪ ಹೊರಿಸಿ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಗೆ ಪತ್ರ ಬರೆದಿದ್ದಾರೆ. ಅಧ್ಯಕ್ಷರಾದ ಗೋವಿಂದ ಸ್ವಾಮಿಯವರಿಗೆ ವೈಯಕ್ತಿಕ ತೊಂದರೆ ಕೋಡಲು ಬಯಸಿದ ಮಾನ್ಯ ರುದ್ರಪ್ಪ ಅವರು, ಡಾ, ಎಂ.ವಿ ವೆಂಕಟೇಶ್ ಮತ್ತು ಕನ್ನಡ - ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಗಾಯತ್ರಿ ಅವರ ಮೂಲಕ ಸಂಚು ರೂಪಿಸಿ ಅಕಾಡೆಮಿಯಲ್ಲಿ ಕೆಲಸ ಮಾಡದಂತೆ, ಸಹಕಾರ ಸಿಗದಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂತರ ದಿನಾಂಕ:30.5.2025 ರಲ್ಲಿ ಸಭಾಪತಿ ಯವರು ಟಿಪ್ಪಣಿಗಳನ್ನು ಕೊಟ್ಟು ಅಧ್ಯಕ್ಷರನ್ನು ಬದಲಿಸಲು ಸೂಚಿಸಿದ್ದಾರೆ. ಹೀಗಾಗಿ ಕಳೆದ ನಾಲ್ಕು ತಿಂಗಳುಗಳಿಂದ ರಿಜಿಸ್ಟ್ರಾರ್ ಕೂಡ ಅಕಾಡೆಮಿಗೆ ಬಾರದೆ ಅಕಾಡೆಮಿಯ ಕೆಲಸಗಳಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವರಿಗೆ ಹಾಗೂ ಗೋವಿಂದ ಸ್ವಾಮಿ ಪತ್ರ ಬರೆದಿದ್ದಾರೆ. ಅಕಾಡೆಮಿಯ ಲೆಕ್ಕಾಧಿಕಾರಿ ಮತ್ತು ರಿಜಿಸ್ಟ್ರಾರ್ ಗಳ ಕಡೆಯವರಿಗೆ ಎಲ್ಲಾ ಕಾರ್ಯಕ್ರಮಗಳನ್ನು ನೀಡಬೇಕೆಂದು ಹಣ ಪಾವತಿಗೆ ಅಡಚಣೆ ಮಾಡುತ್ತಿದ್ದಾರೆ. ಕಲಾವಿದರಿಂದ ಸಂಘಗಳಿಂದ ಸಂಸ್ಥೆಗಳಿಂದ ಮಾಮೂಲು ವಸೂಲಿ ಕೂಡಾ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕೆಲವು ಹಿರಿಯ ಅಧಿಕಾರಿಗಳು ಕೈಜೋಡಿಸಿದ್ದಾರೆ. ರಾಜ್ಯೋತ್ಸವ ಹಾಗೂ ಇತರೆ ಪ್ರಶಸ್ತಿಗಳಲ್ಲಿ ಕೂಡಾ ಪ್ರಬಲ ಸಮದಾಯಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿ ಗೋವಿಂದ ಸ್ವಾಮಿಯವರು ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ. ಬಂಜಾರ ಅಕಾಡೆಮಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಮುದಾಯದವರಲ್ಲಿ ಮಾಡಿರುವ ಉತ್ತಮ ಕೆಲಸಗಳಿಂದ ಅಕಾಡೆಮಿಗೆ, ಇಲಾಖೆಗೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ಒಬ್ಬ ಸರ್ಕಾರಿ ನೌಕರರಾಗಿರುವ ಗೋವಿಂದಸ್ವಾಮಿ ಯಾವುದೇ ಗೌರದ ಧನ, ಸಂಭಾವನೆ ಮತ್ತು ಭತ್ಯೆ ಸ್ವೀಕರಿಸುತ್ತಿಲ್ಲ. ಇಲಾಖೆಯಿಂದ ಅನುಮತಿ ಪತ್ರ ಪಡೆದು ಅರ್ಧ ದಿನ ಇಲಾಖೆಯಲ್ಲಿ ಅರ್ಧ ದಿನ ಅಕಾಡೆಮಿಯಲ್ಲಿ ಗೌರವ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸ ಬೇಕೆಂದು ಮಾನ್ಯ ರುದ್ರಪ್ಪ ಲಮಾಣಿ ಅವರ ಒತ್ತಡದ ಮೇಲೆ ಸದಸ್ಯರನ್ನು ಕರೆಯಿಸಿ ಸಹಿ ಹಾಕಿಸುವುದು ತಿಳಿದು ಬಂದಿದೆ. ಇದರಿಂದ ಮನ ನೊಂದು ಸ್ವತಃ ಅಧ್ಯಕ್ಷರೇ ರಾಜಿನಾಮೆ ಕೋಡಲು ಮುಂದಾಗಿದ್ದರು ಎಂದು ವರದಿಯಾಗಿದೆ.

