ಕೆ.ಪಿ ನಂಜುಂಡಿ ವಿಶ್ವಕರ್ಮ ರಾಯಚೂರು ಜಿಲ್ಲೆಗೆ ಆಗಮನ – ಜಿಲ್ಲಾ ಅಧ್ಯಕ್ಷ ಬ್ರಹ್ಮ.ಗಣೇಶ ವಕೀಲರು.
ಸಿಂಧನೂರು ಅ.30


ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮಾಜದ ಧೀಮಂತ ನಾಯಕರು, ಹುಟ್ಟು ಹೋರಾಟಗಾರರು, ಸಂಘಟನಾ ಚತುರರು, ಸಮಾಜ ಸೇವಕರು, ಮಾಜಿ ವಿಧಾನ ಪರಿಷತ್ ಸದಸ್ಯರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭೆಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ.ಪಿ ನಂಜುಂಡಿ ವಿಶ್ವಕರ್ಮ ಯವರು ಇದೇ ದಿನಾಂಕ 31-10-2025 ರಂದು ಶುಕ್ರವಾರ ರಾಯಚೂರು ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜ ಸಂಘಟನೆ ಗಟ್ಟಿ ಗೊಳಿಸಲು, ಭವಿಷ್ಯದ ಸಂಘಟನೆಯ ರೂಪ ರೇಷೆಗಳ ಬಗ್ಗೆ ತಿಳಿಸಲು ರಾಯಚೂರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಕೆ.ಪಿ ನಂಜುಂಡಿ ವಿಶ್ವಕರ್ಮ ರವರನ್ನು ಜಿಲ್ಲೆಯ ಪರವಾಗಿ ಹಾರ್ದಿಕ ಸ್ವಾಗತವನ್ನು ಕೋರುತ್ತೇವೆ. ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭೆಯ ಜಿಲ್ಲಾಧ್ಯಕ್ಷ ಬ್ರಹ್ಮ.ಗಣೇಶ ವಕೀಲರು, ರಾಜ್ಯ ಕಾರ್ಯದರ್ಶಿ ಸೋಮಣ್ಣ ಸುಕಾಲಪೇಟೆ ಮತ್ತು ಜಿ.ವಿ.ನೌ.ಸಂ ಪ್ರಧಾನ ಕಾರ್ಯದರ್ಶಿ ಕೆ.ರಾಮು ಗಾಣಧಾಳ್ ಜಂಟಿಯಾಗಿ ತಿಳಿಸಿದರು. ರಾಯಚೂರು ಜಿಲ್ಲೆಯಲ್ಲಿ ಸಂಘಟನೆ ಬಲ ಪಡಿಸಲು ಕೆ.ಪಿ ನಂಜುಂಡಿ ವಿಶ್ವಕರ್ಮ ಅವರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವಿವರಗಳು ಈ ಕೆಳಗಿನಂತಿವೆ. ದಿನಾಂಕ 31-10-2025 ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಲಿಂಗಸೂಗೂರು ತಾಲೂಕು ಕೇಂದ್ರಕ್ಕೆ ಆಗಮನ. ಬೆಳಿಗ್ಗೆ 8.30 ಕ್ಕೆ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ದಿ//ಶ್ರೀ ಉಮೇಶ (ಮಾನಪ್ಪ) ಬಡಿಗೇರ ಇವರ ಮನೆಗೆ ಭೇಟಿ, ಕುಟುಂಬದವ ರೊಂದಿಗೆ ಮಾತುಕತೆ. ಬೆಳಿಗ್ಗೆ 9.00 ಗಂಟೆಗೆ ಲಿಂಗಸೂಗೂರಿನ ಶ್ರೀಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ, ಸಮಾಜದ ಮುಖಂಡರೊಂದಿಗೆ ಚರ್ಚೆ ನಂತರ ಸಮಾಜದ ಸಂಘಟನಾ ಕಾರ್ಯದರ್ಶಿ ಚನ್ನಪ್ಪ.ಕೆ ಹೊಸಹಳ್ಳಿ ಅವರ ಸುಪುತ್ರ ಕು.ಮೌನೇಶ ವಿಶ್ವಕರ್ಮ ಹುಟ್ಟು ಹಬ್ಬದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಬೆಳಿಗ್ಗೆ 10.30 ಕ್ಕೆ ಲಿಂಗಸೂಗೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ಕರೆದಿರುತ್ತಾರೆ ಬೆಳಗ್ಗೆ :11.30 ಕ್ಕೆ:- ಮುದುಗಲ್ ಪಟ್ಟಣದ ನೂತನ ಶ್ರೀ ಕಾಳಿಕಾದೇವಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳುವಿಕೆ.ಮದ್ಯಾಹ್ನ 2.ಗಂಟೆಗೆ ಕ್ಕೆ ಮಸ್ಕಿ ತಾಲೂಕು ಕೇಂದ್ರಕ್ಕೆ ಭೇಟಿ,ವಿಶ್ವಕರ್ಮ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವಿಕೆ.ನಂತರ ಮಸ್ಕಿ ತಾಲೂಕ ಅಧ್ಯಕ್ಷರಾದ ದಿ.ಜನಾರ್ಧನ್ ಪತ್ತಾರ್ ರವರ ಮನಗೆ ಭೇಟಿ,ಕುಟುಂಬದವರೊಂದಿಗೆ ಮಾತುಕತೆ. ಮದ್ಯಾಹ್ನ 3.30 ಕ್ಕೆ ಕವಿತಾಳ ಪಟ್ಟಣಕ್ಕೆ ಭೇಟಿ, ವಿಶ್ವಕರ್ಮ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವಿಕೆ. ಸಂಜೆ: 5 ಗಂಟೆಗೆ ಸಿರವಾರ ತಾಲೂಕು ಕೇಂದ್ರಕ್ಕೆ ಭೇಟಿ, ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರು, ಅ.ಕ.ವಿ.ಮ ಮಾಜಿ ಜಿಲ್ಲಾಧ್ಯಕ್ಷರಾದ ದಿ.ಶ್ರೀ ಆನಂದಕುಮಾರ ಬಡಿಗೇರ್ ಇವರ ಮನೆಗೆ ಭೇಟಿ, ಕುಟುಂಬದವ ರೊಂದಿಗೆ ಮಾತುಕತೆ ನಂತರ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವಿಕೆ. ಸಂಜೆ :7.30 ಕ್ಕೆ ರಾಯಚೂರು ನಗರಕ್ಕೆ ಆಗಮನ. ಶ್ರೀ ಕಾಳಿಕಾ ದೇವಸ್ಥಾನಕ್ಕೆ ಭೇಟಿ, ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವಿಕೆ. ರಾತ್ರಿ 9.30 ಗಂಟೆಗೆ ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸೆಲ್:9449690119, 8971257519 ಸಂಪರ್ಕಿಸಿ, ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿಗಳ ವಿಶ್ವಕರ್ಮ ಮುಖಂಡರುಗಳು ಈ ಪ್ರವಾಸದ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘಟನೆಯನ್ನು ಬಲಪಡಿಸ ಬೇಕೆಂದು ಮನವಿ ಮಾಡಿದರು.

