ಶಿಕ್ಷಕ ಶ್ರೀ ಎಂ.ಎಚ್ ಪೂಜಾರಿ ಯವರ – ಭಕ್ತಿ ಗೀತೆ ಬಿಡುಗಡೆ.
ಮರಡಿ ಬೂದಿಹಾಳ ಅ.30


ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಮರಡಿ ಬೂದಿಹಾಳ ಗ್ರಾಮದ ಆರಾಧ್ಯ ದೈವಾಗಿರುವ ಮಹಾ ಮಹಿಮ ಶ್ರೀ ಮಾರುತೇಶ್ವರನ ಕುರಿತು “ಭಕ್ತರ ಉಸಿರು ಶ್ರೀ ಮಾರುತೇಶ್ವರ ದೇವರು” ಎಂಬ ಭಕ್ತಿ ಗೀತೆಯನ್ನು ಅತ್ಯಂತ ಸರಳವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವುದರ ಮೂಲಕ ಊರಿನ ಸಮಸ್ತ ಗುರು ಹಿರಿಯರು ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ ಬಿಡುಗಡೆ ಮಾಡಿದರು.ಭಕ್ತರ ಉಸಿರು ಶ್ರೀ ಮಾರುತೇಶ್ವರ ದೇವರು ಎಂಬ ಭಕ್ತಿ ಗೀತೆಯಲ್ಲಿ ಶ್ರೀ ಮಾರುತೇಶ್ವರ ದೇವರ ಪವಾಡಗಳು, ಭಕ್ತಿ ಭಾವಗಳು ಊರಿನ ಗಣ್ಯ ಮಾನ್ಯರ ಸಹಕಾರ ಪ್ರೋತ್ಸಾಹ ಎಲ್ಲವನ್ನು ಒಳಗೊಂಡಂತೆ ಶ್ರೀ ಎಂ.ಎಚ್ ಪೂಜಾರಿ, ಶಿಕ್ಷಕರು HPS ಹಿರೇಮಳಗಾವಿ ಹಾಗೂ ಉಪಾಧ್ಯಕ್ಷರು SC/ST ನೌಕರರ ಸಂಘ ಹುನಗುಂದ ಮತ್ತು ನಿರ್ದೇಶಕರು ಶಿಕ್ಷಕರ ಪತ್ತಿನ ಸಹಕಾರಿ ಸಂಘ ಹುನಗುಂದ ಇವರು ಅತ್ಯಂತ ಸೊಗಸಾಗಿ ಸುಂದರವಾಗಿ ಗೀತೆ ರಚಿಸಿ ಹಾಡಿಸಿ ಮರಡಿ ಬೂದಿಹಾಳ, ಮೂಗನೂರು ಹಾಗೂ ಬಸವನಾಳ ಗ್ರಾಮದವರ ಮೆಚ್ಚುಗೆಗೆ ಪಾತ್ರರಾದರು. ಭಕ್ತರ ಉಸಿರು ಶ್ರೀ ಮಾರುತೇಶ್ವರ ದೇವರು ಎಂಬ ಭಕ್ತಿ ಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಸ್ತ ಊರಿನ ಗಣ್ಯ ಮಾನ್ಯರಾದ ಶ್ರೀ ಶಂಕರಗೌಡ ಗೌಡರ, ಶ್ರೀ ಮಲ್ಲನಗೌಡ ಗೌಡರ, ಶ್ರೀ ಯಮನಪ್ಪ ಗುರಿಕಾರ, ಶ್ರೀ ಮಹಮದ್ ಸಾಬ್ ವಾಲಿಕಾರ್, ಶ್ರೀ ರಾಮಣ್ಣ ಒರಕೇರಿ, ಶ್ರೀ ಭೀಮಪ್ಪ ಪೂಜಾರಿ, ಶ್ರೀ ಅಶೋಕ್ ಅಂಗಡಿ, ಶ್ರೀ ಶಿವಲಿಂಗಪ್ಪ ಬೂದಿಹಾಳ,ಶ್ರೀ ದುರಗಪ್ಪ ಮಾದರ, ಶ್ರೀ ಬಂಗಾರಿಗೌಡ ಪಾಟೀಲ್, ಶ್ರೀ ಹನುಮಂತ ಬೈಲಕೋರ, ಶ್ರೀ ಚಂದ್ರು ಪೂಜಾರಿ, ಶ್ರೀ ಕಾಂತಪ್ಪ ಬೇನಾಳ, ಶ್ರೀ ಮಹಾಂತೇಶ್ ನಾಗರಾಳ ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಗೀತೆಗೆ ಸಹಾಯ ಸಹಕಾರ ನೀಡಿದವರು ಶ್ರೀ ಡಾ, ಗೋಪಾಲ.ಎಂ ಒರಕೇರಿ. ಶಿಕ್ಷಕ ಶ್ರೀ ಮುತ್ತು ವಡ್ಡರ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಎಂದು ವರದಿಯಾಗಿದೆ.

