ಕುಮಸಗಿಯಲ್ಲಿ ಕನ್ನಡ – ರಾಜ್ಯೋತ್ಸವ ಆಚರಣೆ.
ಆಲಮೇಲ ನ.03

ಕನ್ನಡ ನಾಡು, ನುಡಿ, ನೆಲ, ಜಲದ ವಿಷಯ ಇದ್ದಾಗ ಎಲ್ಲರೂ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಿಕ್ಷಕ ರಾಕೇಶ ಕುಡಿಗನೂರ ಹೇಳಿದರು.
ಅವರು ತಾಲೂಕಿನ ಕುಮಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ನಾಡಭಕ್ತಿ, ಕನ್ನಡ ನಾಡಿನ ಸಾಹಿತ್ಯ, ಸಾಹಿತಿಗಳ ಬಗ್ಗೆ, ಇತಿಹಾಸ, ಪರಂಪರೆ ಕುರಿತು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ, ಕನ್ನಡ ಉಳಿಸಿ ಬೆಳೆಸುವ ಕಾರ್ಯವಾಗ ಬೇಕಿದೆ ಎಂದರು.
ಶಾಲೆಯ ವಿದ್ಯಾರ್ಥಿಗಳಿಂದ ರಾಜ್ಯೋತ್ಸವದ ಗೀತೆಗಳು, ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಸಂಜುಕುಮಾರ ತಳವಾರ ವಹಿಸಿ ಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಪ್ರತಿನಿಧಿಗಳಾದ ರಮಜಾನ ನದಾಫ್, ತಾ.ಪಂ ಮಾಜಿ ಸದಸ್ಯ ರಾಜು ತಳವಾರ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಲಕ್ಷ್ಮೀಕಾಂತ ಚಾವರ, ರೇವಣಸಿದ್ದ ಗೌಡ ಪಾಟೀಲ, ಪರಶುರಾಮ ಮಾದರ, ಯುವ ಮುಖಂಡರಾದ ಅಶೋಕ ತಳವಾರ, ಸಿದ್ದು ಮಾರದ, ಭೀಮು ಯಾತ್ನೂರ, ಆಕಾಶ ತಳವಾರ, ಶ್ರೀಶೈಲ ಬಮ್ಮನಜೋಗಿ, ರಾಜೇಂದ್ರ ವಾಲಿಕಾರ, ಮುಖ್ಯ ಗುರುಗಳಾದ ಪರಮೇಶ್ವರಯ್ಯ, ಎಸ್ .ಬಿ.ನಿಲುವಿಗಿ, ಎಸ್. ಎಸ್. ಭಜಂತ್ರಿ, ಎಂ.ಜಿ.ಮೇದಿ, ಎನ್.ಬಿ.ನಾಯ್ಕೋಡಿ, ಜಿ.ಜಿ.ಸಜ್ಜನ, ಪೂಜಿತ.ಆರ್.ಟಿ ,ಅತಿಥಿ ಶಿಕ್ಷಕರಾದ ಪ್ರದೀಪ ದೊಡ್ಡಮನಿ, ಭಾಗ್ಯಶ್ರೀ ತಳವಾರ, ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸ್ವಾಗತವನ್ನು ಎಸ್.ಪಿ ತಡಸ, ನಿರೂಪಣೆಯನ್ನು ಶ್ರೀಮತಿ ಪವಿತ್ರ.ಎಂ ನೆರವೇರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

